ಪ್ರತಿಭಾ ಪತ್ರಿಕೆ -ಜೂನ್ 2026

ಕಥೆ, ಕವನ ವಿಭಾಗ

ಹಾಡು : ನಿನ್ನನೇ ನಂಬಿದೆನು

ಹಾಡಿರುವವರು : ಎಸ್ ವಿಠ್ಠಲ ರಾವ್

ಅವರೇ ನುಡಿಸಿರುವ ಕೀ ಬೋರ್ಡ್


ಶ್ರೀ ಜಯರಾಂ ಕೆ ವಿ ಅವರು ಬರೆದ ಒಂದು ಘಟನೆ

( ಅವರ ಮೊಮ್ಮಗ ನೋಡನೆ ಅವರ ಮಾತು )

ತಾತ ಕೇಳಿದ್ರು 3 ವರ್ಷದ ಮೊಮ್ಮಗನನ್ನು :

“ ನೀನು ಅಮ್ಮನಿಗೆ ಮಾತ್ರ ಮುತ್ತು ಕೊಡುತೀಯಲ್ಲ. ಅಪ್ಪನಿಗೆ ಮತ್ತು ತಾತನಿಗೆ ಯಾಕೆ ಮುತ್ತು ಕೊಡೋಕ್ಕೆ ಇಷ್ಟ ಪಡುವುದಿಲ್ಲ?”. ಅವನ ಉತ್ತರ ಈ ರೀತಿ ಇತ್ತು. “ ನಿಮ್ಮಿಗರಿಗೂ ದಾಡಿ ಇದೆ,ಚುಚ್ಚುತ್ತೆ.

ತಾತ ಕೇಳಿದ್ರು ”. ಹಾಗಾದ್ರೆ ನೀನು ಮೋದಿ ಅವರಿಗೆ ಮುತ್ತು ಕೊಡ್ತಿಯಾ? “

ಮೊಮ್ಮಗನ ಉತ್ತರ ” ಇಲ್ಲಪ್ಪಾ ಅವರಿಗೂ ದಾಡಿ ಇದೆ “. ತಾತ ಕೇಳಿದ್ರು ”“ಹಾಗಾದ್ರೆ? “

ಮೊಮ್ಮಗನ ಉತ್ತರ ಎಲ್ಲರನ್ನು ಚಕಿತಗೊಳಿಸಿತು.

“ಮೋದಿಅವರ ಫೋಟೋ ಕೊಡಿ, ಅದಕ್ಕೆ ಮುತ್ಹು ಕೊಡ್ತೀನಿ ”


ಹಾಡು : ಭಯವೇಕೆ ಮನುಜರಿಗೆ .. ಹಾಡಿರುವವರು : ಶ್ರೀಮತಿ ಗೀತಾ ಕೃಷ್ಣಮೂರ್ತಿ

ಹಾಡಿರುವವರು : ಶ್ರೀಮತಿ ಗೀತಾ ಕೃಷ್ಣಮೂರ್ತಿ

ಈ ಕೆಳಗಿನ ಲಿಂಕ್ ಒತ್ತಿ ಹಾಡು ಕೇಳಿ :

ಕವನ – ಭಾವನಾತ್ಮಕ ಸಂಬಂಧ-ರಚನೆ: ಶ್ರೀಮತಿ ಸುಧಾ ಶ್ರೀನಾಥ್

ಮನದ ಮಾತನಾಲಿಸುವ,

ಮೌನದ ನೋವನರಿಯುವ…

ಅಪರೂಪದ ಆ ಬಂಧ,

ಅವಿನಾಭಾವ ಸಂಬಂಧ…

ರಕ್ತದ ನಂಟಿಗಿಂತ ಮಿಗಿಲಾದ,

ನಂಬಿಕೆಯ ಸುಂದರ ಮೂರ್ತಿ…

ಹೃದಯದಗರ್ಭಗುಡಿಯಲಿನೆಲೆಸಿರುವ,

ಗಟ್ಟಿ ಬಂಗಾರದ ಆಕೃತಿ…

ಅನುಮಾನಕೆ ಆಸ್ಪದವನು

ಎಂದೆಂದಿಗೂ ಕೊಡದ…

ಅಪರಿಮಿತ ಅನುರಾಗದ

ನಿರಂತರ ಹರಿವ ಕಾಲುವೆ…

ವಿಶ್ವಾಸ ಮಾತ್ರ  ಮೆಟ್ಟಿಲಾಗಿ,

ನಿರ್ಮಿತವಾದ ಸುಂದರ ಸೇತುವೆ…

ನೀ ಎಷ್ಟೇ ದೂರವಿದ್ದರೂ  ಹತ್ತಿರವೆನಿಸುವ

ಹೃದಯದ ನಿಶ್ಶಬ್ದ ದೈವವೆ

ಹಾಸ್ಯ : ನನ್ನ ಮದುವೆಗೆ ಹೆಣ್ಣು ನೋಡಲು ಹೋದಾಗ …ರಚನೆ : ಶ್ರೀ ಜಯರಾಂ ಎ ಎಸ್

ಪ್ರಿಯ ಓದುಗರೇ , ಇದು 90% ನಡೆದ ಘಟನೆಗೆ 10% ಉಪ್ಪು , ಖಾರ ಹಾಕಿ ಹೇಳಿದ್ದೇನೆ ! ಕೇಳಿ ಆನಂದಿಸಿ . ದಯವಿಟ್ಟು ಗಮನಿಸಿ : watch on YouTube ಎಂಬುದನ್ನು ಒತ್ತಿದರೆ , ಮೊಬೈಲ್ ನಲ್ಲಿ ದೊಡ್ಡದಾಗಿ ಕಾಣುತ್ತದೆ . ಮತ್ತೋದು ಅಂಶ : ಈ ವಿಡಿಯೋ ಮಾಡಿ 4 ವರ್ಷ ಆಗಿದೆ .

Similar Posts

  • ಪ್ರತಿಭಾ ಪತ್ರಿಕೆ- ಅಕ್ಟೋಬರ್ 2026

    ಸಂಪಾದಕರ ಬರಹ ಸಂಪಾದಕರ ಬರಹ  ಅನೇಕ ಜನರು ಈ ಪತ್ರಿಕೆಯನ್ನು ಓದುತ್ತಿರುವುದು ಸಂತಸದ ಸಂಗತಿ.ಆದರೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದರಲ್ಲಿ ಕೆಲವೇ ಕೆಲವು ಮಂದಿ ಆಸಕ್ತಿ ತೋರುತ್ತಿದ್ದಾರೆ. ದಯವಿಟ್ಟು ಇನ್ನೂ ಹೆಚ್ಚು ಜನರು ಸ್ಪರ್ಧೆಗಳಲ್ಲಿ ಭಾಗವಹಿಸಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ .ಇದರಿಂದ ಪತ್ರಿಕೆಯನ್ನು ಇನ್ನೂ ಉತ್ತಮವಾಗಿ ಮಾಡಲು ಸಹಾಯವಾಗುತ್ತದೆ. ಈ ಸಲದ ಸ್ಪರ್ಧೆ ಕರ್ನಾಟಕ ರಾಜ್ಯ ಹಾಗೂ ಕನ್ನಡ ಭಾಷೆಗೆ ಸಂಬಂಧಪಟ್ಟಿದೆ ಹಾಗೂ ಸುಲಭವಾಗಿದೆ. ದಯವಿಟ್ಟು ಎಲ್ಲರೂ ಭಾಗವಹಿಸಿ ಮತ್ತು ಈ ಪತ್ರಿಕೆಯ…

  • ನಿಮಗಿದು ಗೊತ್ತೇ ?-ನವೆಂಬರ್ 2026 :

    ಬಾಳೆಹಣ್ಣುಗಳನ್ನು ಮನೆಯಲ್ಲಿ ಇಟ್ಟಾಗ ಒಂದು ವಿಷಯ ಗಮನಿಸಿರಬಹುದು. ಒಂದು ಬಾಳೆಹಣ್ಣು ಬೇಗ ಹಣ್ಣಾದರೆ, ಅದರ ಜೊತೆಯಲ್ಲಿರುವ ಉಳಿದ ಬಾಳೆಹಣ್ಣುಗಳೂ ಬೇಗ ಹಣ್ಣಾಗುತ್ತವೆ. ಏಕೆ ಹೀಗೆ? ಬಾಳೆಹಣ್ಣು ಹಣ್ಣಾಗುವಾಗ **ಎಥಿಲೀನ್** ಎಂಬ ಒಂದು ಅನಿಲವನ್ನು ಹೊರಬಿಡುತ್ತದೆ. ಈ ಅನಿಲವು ಹತ್ತಿರದಲ್ಲಿರುವ ಹಣ್ಣುಗಳೂ ಹಣ್ಣಾಗಲು ಸಹಾಯ ಮಾಡುತ್ತದೆ. ಆದ್ದರಿಂದ ಒಂದು ಹಣ್ಣು ಬೇಗ ಹಣ್ಣಾದಾಗ, ಅದರ ಜೊತೆಯಲ್ಲಿರುವ ಹಣ್ಣುಗಳೂ ಬೇಗ ಹಣ್ಣಾಗಬಹುದು. ಇದನ್ನು ತಿಳಿದಿದ್ದರೆ ಬಾಳೆಹಣ್ಣುಗಳನ್ನು ಹೆಚ್ಚು ದಿನ ಸಂರಕ್ಷಿಸಲು ಸಹಾಯವಾಗುತ್ತದೆ. ಬೇಗ ಹಣ್ಣಾಗಬಾರದು ಎಂದರೆ, ಹಣ್ಣಾದ ಬಾಳೆಹಣ್ಣುಗಳನ್ನು ಉಳಿದವುಗಳಿಂದ…

  • ಪ್ರತಿಭಾ ಪತ್ರಿಕೆ – ಸೆಪ್ಟಂಬರ್ 2026

    ಸಂಪಾದಕರ ಬರಹ ಸಂಪಾದಕರ ಬರಹ ಪ್ರಿಯ ಓದುಗರೇ , 35 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ನನಗೆ , ಈ ಸಂಚಿಕೆಯನ್ನು ಶಿಕ್ಷಕರ ದಿನದಂದು , ಈ ಲೇಖನದೊಂದಿಗೆ ಪ್ರಾರಂಭ ಮಾಡುವ ಆಸೆಯೂ ಸಹಜವಾಗಿಯೇ ಮೂಡಿದೆ. ಶಿಕ್ಷಕರು — ಭವಿಷ್ಯಕ್ಕೆ ದಾರಿ ತೋರುವ ದಾರಿದೀಪಗಳು.“ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶಿಕ್ಷಣವೇ ತಳಹದಿ.” ಒಂದು ಸಮಾಜದ ಪ್ರಗತಿಯ ವೇಗವನ್ನು ಅಳೆಯಬೇಕಾದರೆ, ಆ ಸಮಾಜ ತನ್ನ ಶಿಕ್ಷಣಕ್ಕೆ ನೀಡುವ ಮಹತ್ವವನ್ನು ನೋಡಬೇಕು. ಜ್ಞಾನ, ವಿವೇಕ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ…

  • ಸ್ಪರ್ಧಾ ವಿಭಾಗ

    ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ 10 ರಿಂದ 16 ವರ್ಷ ಒಳಗಿನ ಮಕ್ಕಳ ವಿಭಾಗ 10 ವರ್ಷದ ಒಳಗಿನ ಮಕ್ಕಳ ವಿಭಾಗ ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ – ಬರೆದು ಕಳಿಸಲು ಕೊನೆಯ ದಿನಾಂಕ 25/04/2026. – A4 ಹಾಳೆ ಯಲ್ಲಿ ಬರೆದು, ಫೋಟೋ ತೆಗೆದು ಕಳಿಸಿ . – ನೀವು ಬರೆದ ಚಿತ್ರದ ಮೇಲ್ಭಾಗದಲ್ಲಿ, ಹೆಸರು, ವಯಸ್ಸು ಹಾಗು ಸಂಕ್ಷಿಪ್ತ ವಿಳಾಸ ಬರೆದು ಕಳಿಸಿ ನನ್ನ ನೆಚ್ಚಿನ ವ್ಯಕ್ತಿ ಸ್ಪರ್ಧೆಯ ಉತ್ತರಗಳು ಶ್ರೀಮತಿ ಸುಮಾ ಆನಂದ್…

  • ನೀರು ಏಕೆ ವಿಚಿತ್ರವಾಗಿ ವರ್ತಿಸುತ್ತದೆ?

    4°C ರಹಸ್ಯ ಸಾಮಾನ್ಯವಾಗಿ ಯಾವುದೇ ವಸ್ತುವನ್ನು ತಂಪು ಮಾಡಿದಂತೆ ಅದು ಕುಗ್ಗುತ್ತದೆ. ಆದರೆ ನೀರು ಮಾತ್ರ 4°C ಹತ್ತಿರ ಒಂದು ವಿಚಿತ್ರ ವರ್ತನೆ ತೋರಿಸುತ್ತದೆ. 4°C ವರೆಗೆ ತಂಪಾಗುವಾಗ ನೀರು ಕುಗ್ಗುತ್ತದೆ. ಆದರೆ 4°C ಗಿಂತ ಕೆಳಗೆ ಹೋದಾಗ ಮತ್ತೆ ನಿಧಾನವಾಗಿ ಹಿಗ್ಗಲು ಪ್ರಾರಂಭಿಸುತ್ತದೆ. ಇದೇ ನೀರಿನ ಒಂದು ಅದ್ಭುತ ಗುಣ. ನೀರಿನ ಉಷ್ಣಾಂಶ 4°C ಇದ್ದಾಗ ಅದರ ಸಾಂದ್ರತೆ ಗರಿಷ್ಠವಾಗಿರುತ್ತದೆ. ಆದ್ದರಿಂದ 4°C ನೀರು ಇತರ ನೀರಿಗಿಂತ ಹೆಚ್ಚು ಭಾರವಾಗಿದ್ದು ಕೆಳಕ್ಕೆ ಹೋಗುತ್ತದೆ. ಚಳಿಗಾಲದಲ್ಲಿ ಕೆರೆಯ…

  • ಕಥಾ ವಿಭಾಗ

    ಮಹಿಳಾ ಸಬಲೀಕರಣ – AI ಮಾರ್ಗ ಲೇಖಕರು ಶ್ರೀ ಜಯರಾಂ ಕೆ ವಿ ಭಾರತದ ಸಂವಿಧಾನವು ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ. ದಶಕಗಳಲ್ಲಿ, ಮಹಿಳೆಯರು ರಾಜಕೀಯ, ಆಡಳಿತ, ವಿಜ್ಞಾನ ಮತ್ತು ವ್ಯವಹಾರದಲ್ಲಿ ನಾಯಕತ್ವದ ಪಾತ್ರಗಳಿಗೆ ಏರಿದ್ದಾರೆ. ಆದರೂ, ದೇಶಾದ್ಯಂತ ಲಕ್ಷಾಂತರ ಜನರಿಗೆ – ವಿಶೇಷವಾಗಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ – ಈ ಭರವಸೆ ಭಾಗಶಃ ಮಾತ್ರ ಈಡೇರಿದೆ. ಭಾರತೀಯ ಮಹಿಳೆಯರಲ್ಲಿ ಹೆಚ್ಚಿನ ಭಾಗವು ಕೃಷಿ, ನಿರ್ಮಾಣ, ಸಣ್ಣ-ಪ್ರಮಾಣದ ಕೈಗಾರಿಕೆಗಳು ಅಥವಾ…

One Comment

Leave a Reply

Your email address will not be published. Required fields are marked *