
ಸಂಪಾದಕೀಯ
ಈ ತಿಂಗಳಿನ ಪತ್ರಿಕೆಯಲ್ಲಿ ರಾಮೋತ್ಸವವನ್ನು ವಿವರವಾಗಿ ಕೊಡಲಾಗಿದೆ, ಆದ್ದರಿಂದ ಈ ಸಲವು ವ್ಯಕ್ತಿ ಪರಿಚಯ ಇರುವುದಿಲ್ಲ
ಎರಡೆರಡು ಬಹುಮಾನಗಳನ್ನು ಇಟ್ಟಿದ್ದರೂ , ಕೆಲವೇ ಮಕ್ಕಳು ಚಿತ್ರ ಬರುವೆವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ದಯವಿಟ್ಟು ತಂದೆ-ತಾಯಿಗಳು ಮಕ್ಕಳನ್ನು ಇಂತಹ ಸ್ಪರ್ಧೆಗಳಿಗೆ ಹೆಚ್ಚಾಗಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಈ ಸಲ ಚಿತ್ರಕ್ಕೆ ಶೀರ್ಷಿಕೆ ಬರೆಯುವ ಸ್ಪರ್ಧೆ ಇದೆ. ಅದಕ್ಕಾದರೂ ಬಹಳ ಜನರು ಪ್ರಯತ್ನ ಪಡುತ್ತಾರೆಂದು ಆಶಿಸುತ್ತೇನೆ.
ಮುಂದಿನ ಸಂಚಿಕೆ ,ಅಂದ್ರೆ ಜೂನ್ ತಿಂಗಳ ಸಂಜೆಕ್ಕೆ ಯಲ್ಲಿ ಧ್ವನಿ ವಿಶೇಷ ಎಂಬುದಾಗಿ ಮಾಡುತ್ತಿದ್ದೇನೆ.

ನೀವು ಬರೆದು ಕಳಿಸುವ ಅಗತ್ಯವಿಲ್ಲ ಏನಾದರೂ ಬರೆಯಬೇಕೆಂದು ಇಚ್ಛಿಸಿದರೆ, ಮೊಬೈಲ್ ಫೋನಿನಲ್ಲಿ ಕೇವಲ ವಾಯ್ಸ್ ರೆಕಾರ್ಡ್ ಮಾಡಿ ಕಳಿಸಿದರೆ ಸಾಕು ಅದನ್ನು ಯಥಾವತ್ತಾಗಿ ಹಾಕುತ್ತೇನೆ. ಅಗ ಜನರೆಲ್ಲರೂ ನಿಮ್ಮ ಧ್ವನಿಯಲ್ಲಿ ನೀವು ಕಳಿಸಿದ್ದನ್ನು ಕೇಳಲು ಅನುಕೂಲವಾಗುತ್ತದೆ. ನಿಮಗೂ ಸುಲಭವಾಗುತ್ತದೆ, ಕೇಳುವವರೆಗೂ ಸುಲಭವಾಗುತ್ತದೆ ಹಾಗೂ ನನಗೂ ನೀವು ಬರೆದದ್ದನ್ನೆಲ್ಲಾ ಟೈಪ್ ಮಾಡುವುದು ತಪ್ಪುತ್ತದೆ.
ಉದಾಹರಣೆಗೆ, ಈ ಕೆಳಗಿನ ನನ್ನ ಧ್ವನಿವಾಹಿನಿಯನ್ನು > ಒತ್ತಿ ಕೇಳಿ:
ಹಾಡಾಗಿರಬಹುದು, ಮಾತಾಗಿರಬಹುದು ಏನಾದರೂ ಆಗಿರಲಿ
ಅದನ್ನು ಧ್ವನಿಯ ಮೂಲಕ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ದಯವಿಟ್ಟು ನನಗೆ ಕಳಿಸಿಕೊಡಿ . ಗುಂಪಿನಲ್ಲಿ ಹಾಕುವುದು ಬೇಡ.
ಈ ಸಲದ ಪತ್ರಿಕೆಯಲ್ಲಿ ಬೇರೆ ಬೇರೆ ವಿಭಾಗಗಳಿಗೆ ಹೋಗಬೇಕಾದರೆ ಸುಮ್ಮನೆ ಪೇಜ್ ನಂಬರ್ ಗಳನ್ನು ಒತ್ತಿದರೆ ಸಾಕು.
ಈಗ ಮುಂದಿನ ವಿಭಾಗಕ್ಕೆ ಹೋಗಲು ಎರಡನೇ ನಂಬರನ್ನು ಒತ್ತಿ.