ಪ್ರತಿಭಾ ಪತ್ರಿಕೆ -ಜೂನ್ 2026

ಸ್ಪರ್ಧಾ ವಿಭಾಗ

ಈ ಸಂಚಿಕೆಯ ಸ್ಪರ್ಧೆ

ಈ ಸಂಚಿಕೆಯ ಸ್ಪರ್ಧೆ

ಪ್ರಿಯ ಓದುಗರೇ

ಈ ಸಲದ ಸ್ಪರ್ಧೆ ಬಹು ವಿಶೇಷವಾಗಿದೆ.

ಇದು ರಾಮಾಯಣ ಮಹಾಭಾರತದ ಕಾಲದಲ್ಲಿ ಮೊಬೈಲ್ ಇದ್ದಿದ್ದರೆ ಎಂಬುದನ್ನು ನೀವು ಊಹಿಸಿಕೊಂಡು, ಅದು ಹೇಗಿರುತಿತ್ತು ಎಂದು ಸಂಕ್ಷಿಪ್ತವಾಗಿ 20 ಸಾಲು ಒಳಗಡೆ ಬರೆದು ಕಳಿಸಬೇಕು. ಬರೆದು ಕಳಿಸುವುದಕ್ಕಿಂತ ಧ್ವನಿಯಾಗಿ ನಿಮ್ಮ ಮಾತುಗಳನ್ನು ಕಳಿಸಿದರೆ ಇನ್ನೂ ಉತ್ತಮ ಆಗ ನೀವು ಇನ್ನೂ ಹೆಚ್ಚು ವಿಷಯವನ್ನು ಸಂಕ್ಷಿಪ್ತವಾಗಿ ಕಳಿಸಬಹುದು .ಇದರಿಂದ ನಾನು ಅದನ್ನು ಟೈಪ್ ಮಾಡುವುದು ತಪ್ಪುತ್ತದೆ. ಅತ್ಯಾಕರ್ಷಕ ಬರಹಕ್ಕೆ ಬಹುಮಾನವಿದೆ .ದಯವಿಟ್ಟು ಎಲ್ಲರೂ ಪ್ರಯತ್ನಿಸಿ.

ಹಾಗೆಯೇ ಒಂದು ವಿಷಯ: ಇದು ಕೇವಲ ಹಾಸ್ಯಕ್ಕಾಗಿ ಹಾಗೂ ನಿಮ್ಮ ಊಹೆಗಳಿಗಾಗಿ ಮಾತ್ರ ಮಾಡಿರುವುದೇ ವಿನಹ ಯಾವುದೇ ದುರುದ್ದೇಶ ಇಲ್ಲವೆಂದು ಖಚಿತಪಡಿಸುತ್ತೇನೆ. ಯಾರು ಕೂಡ ಅನ್ಯತಾ ಭಾವಿಸಬಾರದು ಎಂದು ಕೇಳಿಕೊಳ್ಳುತ್ತೇನೆ

ಕಳೆದ ಸಂಚಿಕೆಯ ಸ್ಪರ್ಧೆಯ ಉತ್ತರಗಳು

ಚಿತ್ರದ ಶೀರ್ಷಿಕೆಗಳು

ಶ್ರೀಮತಿ ಸಾಮ್ಯ ನಾಗರಾಜ್

1. ಗೋವಿಂದಾ ಗೋವಿಂದ

2. ಮಾತು ಬೆಳ್ಳಿ ಮೌನ ಬಂಗಾರ

3. ಸೂಪರ್

4. ಭೇಷ್, ಒಪ್ಪಿದೆ

5. ಟಾಟಾ ಬೈ ಬೈ

6. ನೀರು ಬೇಕು, ಬಾಯಾರಿಕೆ

7. ನಿನಗೊಂದು ದೊಡ್ಡ ನಮಸ್ಕಾರ

8. ಅಯ್ಯೋ ಇಷ್ಟೇನಾ, ಇಷ್ಟಕ್ಕೆ ಇಷ್ಟೊಂದ್ ಯೋಚನೆ ಮಾಡಿದ್ನಲ್ಲಪ್ಪ!

9. ಅಭಯ ಹಸ್ತ

10. ಏನೇನೂ ಚೆನ್ನಾಗಿಲ್ಲ. ನೀರಸ

ಶ್ರೀಮತಿ ಸೌಮ್ಯ ನಾಗರಾಜ್ ಅವರು ಒಬ್ಬರೇ ಬರೆದಿದ್ದಾರೆ . ಅವರಿಗೆ ಬಹುಮಾನ ಲಭಿಸಿದೆ. ಅವರಿಗೆ ಅಭಿನದನೆಗಳು.


ಪದಬಂಧ

ಡಾ||ಚಂದ್ರಶೇಖರ ರಾವ್ ಎ ಎಸ್

ಪದಬಂಧ

ಸುಳುಹುಗಳು :

1) ಮಾತಿಗೆ ತಪ್ಪುವುದು

2) ಗೂಬೆ, ಗೂಗೆ, ಹೇನು

3) ನೃತ್ಯದ ಒಂದು ಭಂಗಿ, ಸೋಲಿಲ್ಲದವನು.

ಸುಳುಹುಗಳು :

1)ಬಹಳ ಮಂದಿಯ ಮಾತು

2) ಕೃಷ್ಣಪಕ್ಷ , ಹೆಚ್ಚಳ

3) ಬೇಡುವಿಕೆ .

ಕಳೆದ ಸಂಚಿಕೆಯ ಪದಬಂಧದ ಉತ್ತರಗಳು

A

1. ಪರಿಭ್ರಮಣ 2. ತೆರಿಗೆ 3. ಶಮನ

B

1. ವಂದನಾರ್ಪಣೆ 2. ಬಂದರು 3. ದರ್ಪಕ
ಸರಿ ಉತ್ತರ ಬರೆದವರು :

1) ಶ್ರೀಮತಿ ಸುಬ್ಬಲಕ್ಷ್ಮಿ ಎಸ್ ರಾವ್
2) ಶ್ರೀಮತಿ ರಾಜೇಶ್ವರಿ ನಾಗರಾಜ್
3) ಶ್ರೀಮತಿ ಸೌಮ್ಯ ನಾಗರಾಜ್

4) ಶ್ರೀ ನಾಗರಾಜ್ ಎಂ ಹೆಚ್

Similar Posts

  • ಪ್ರತಿಭಾ ಪತ್ರಿಕೆ- ಆಗಸ್ಟ್ -2026

    ಸಂಪಾದಕರ ಬರಹ ಪ್ರಿಯ ಓದುಗರೇ ,ಕಳೆದ ಸಂಚಿಕೆಯಲ್ಲಿ ಕೈಬರಹದ ಪ್ರಶ್ನೆ ಬಹಳ ಸುಲಭವಾಗಿತ್ತು. ಆದರೂ ಕೇವಲ ಒಬ್ಬರೇ ಒಬ್ಬರು ಬರೆದು ಕಳಿಸಿರುವುದು ಸ್ವಲ್ಪ ಬೇಸರ ತಂದಿದೆ. ಈ ಸಂಚಿಕೆಯಿಂದಲಾದರೂ. ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಯತ್ನಿಸಿ. ಡಾಕ್ಟರ್ ಚಂದ್ರಶೇಖರ್ ರಾವ್ ಅವರು ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೀವು ನಿಮ್ಮ ಅಭಿಪ್ರಾಯಗಳು ವಿಭಾಗದಲ್ಲಿ ನೋಡಬಹುದು. ಕಳೆದ ಸಂಚಿಕೆಯಲ್ಲಿ ಬಹಳ ಓದುಗರು ಡಾಕ್ಟರ್ ನಾಗೇಶ್ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಡಾಕ್ಟರ್ ನಾಗೇಶ್…

  • ಚಿತ್ರಕಲೆ ವಿಭಾಗ

    ಶ್ರೀ ಜಯರಾಂ ಕೆ ವಿ ಅವರು ರಚಿಸಿರುವ ಚಿತ್ರಗಳು ಮತ್ತು ಕಿರು ಲೇಖನಗಳು ಶತಾವಧಾನಿ ಗಣೇಶನ ಭಾವಚಿತ್ರ. ಅವರು UVCE ಯಿಂದ ಎಂಜಿನಿಯರಿಂಗ್ ಮತ್ತು IISc ಯಿಂದ ME ಪದವಿ ಪಡೆದರು. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಳಿಗಾಗಿ ಅವರು ಡಾಕ್ಟರೇಟ್ ಪಡೆದರು. 1962 ರಲ್ಲಿ ಕೋಲಾರದಲ್ಲಿ ಜನಿಸಿದ ಅವರು ಅವಧಾನಿಯಾಗಿದ್ದು, ನೂರಾರು ಜ್ಞಾನವುಳ್ಳ ಭಾಗವಹಿಸುವವರನ್ನು ಏಕಕಾಲದಲ್ಲಿ ನಿಭಾಯಿಸಬಲ್ಲರು, ಅವರು ಅವರ ಆಲೋಚನೆಗಳನ್ನು ತೊಂದರೆಗೊಳಿಸಬಹುದು, ಗೊಂದಲಗೊಳಿಸಬಹುದು ಇತ್ಯಾದಿ. ಆದರೆ ಅವರನ್ನು ಸೋಲಿಸಲು ಅಥವಾ ದಾರಿ…

  • ಪ್ರತಿಭಾ ಪತ್ರಿಕೆ – ಸೆಪ್ಟಂಬರ್ 2026

    ಸಂಪಾದಕರ ಬರಹ ಸಂಪಾದಕರ ಬರಹ ಪ್ರಿಯ ಓದುಗರೇ , 35 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ನನಗೆ , ಈ ಸಂಚಿಕೆಯನ್ನು ಶಿಕ್ಷಕರ ದಿನದಂದು , ಈ ಲೇಖನದೊಂದಿಗೆ ಪ್ರಾರಂಭ ಮಾಡುವ ಆಸೆಯೂ ಸಹಜವಾಗಿಯೇ ಮೂಡಿದೆ. ಶಿಕ್ಷಕರು — ಭವಿಷ್ಯಕ್ಕೆ ದಾರಿ ತೋರುವ ದಾರಿದೀಪಗಳು.“ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶಿಕ್ಷಣವೇ ತಳಹದಿ.” ಒಂದು ಸಮಾಜದ ಪ್ರಗತಿಯ ವೇಗವನ್ನು ಅಳೆಯಬೇಕಾದರೆ, ಆ ಸಮಾಜ ತನ್ನ ಶಿಕ್ಷಣಕ್ಕೆ ನೀಡುವ ಮಹತ್ವವನ್ನು ನೋಡಬೇಕು. ಜ್ಞಾನ, ವಿವೇಕ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ…

  • ಕಥಾ ವಿಭಾಗ

    ಮಹಿಳಾ ಸಬಲೀಕರಣ – AI ಮಾರ್ಗ ಲೇಖಕರು ಶ್ರೀ ಜಯರಾಂ ಕೆ ವಿ ಭಾರತದ ಸಂವಿಧಾನವು ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ. ದಶಕಗಳಲ್ಲಿ, ಮಹಿಳೆಯರು ರಾಜಕೀಯ, ಆಡಳಿತ, ವಿಜ್ಞಾನ ಮತ್ತು ವ್ಯವಹಾರದಲ್ಲಿ ನಾಯಕತ್ವದ ಪಾತ್ರಗಳಿಗೆ ಏರಿದ್ದಾರೆ. ಆದರೂ, ದೇಶಾದ್ಯಂತ ಲಕ್ಷಾಂತರ ಜನರಿಗೆ – ವಿಶೇಷವಾಗಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ – ಈ ಭರವಸೆ ಭಾಗಶಃ ಮಾತ್ರ ಈಡೇರಿದೆ. ಭಾರತೀಯ ಮಹಿಳೆಯರಲ್ಲಿ ಹೆಚ್ಚಿನ ಭಾಗವು ಕೃಷಿ, ನಿರ್ಮಾಣ, ಸಣ್ಣ-ಪ್ರಮಾಣದ ಕೈಗಾರಿಕೆಗಳು ಅಥವಾ…

  • ನಿಮಗಿದು ಗೊತ್ತೇ ?-ನವೆಂಬರ್ 2026 :

    ಬಾಳೆಹಣ್ಣುಗಳನ್ನು ಮನೆಯಲ್ಲಿ ಇಟ್ಟಾಗ ಒಂದು ವಿಷಯ ಗಮನಿಸಿರಬಹುದು. ಒಂದು ಬಾಳೆಹಣ್ಣು ಬೇಗ ಹಣ್ಣಾದರೆ, ಅದರ ಜೊತೆಯಲ್ಲಿರುವ ಉಳಿದ ಬಾಳೆಹಣ್ಣುಗಳೂ ಬೇಗ ಹಣ್ಣಾಗುತ್ತವೆ. ಏಕೆ ಹೀಗೆ? ಬಾಳೆಹಣ್ಣು ಹಣ್ಣಾಗುವಾಗ **ಎಥಿಲೀನ್** ಎಂಬ ಒಂದು ಅನಿಲವನ್ನು ಹೊರಬಿಡುತ್ತದೆ. ಈ ಅನಿಲವು ಹತ್ತಿರದಲ್ಲಿರುವ ಹಣ್ಣುಗಳೂ ಹಣ್ಣಾಗಲು ಸಹಾಯ ಮಾಡುತ್ತದೆ. ಆದ್ದರಿಂದ ಒಂದು ಹಣ್ಣು ಬೇಗ ಹಣ್ಣಾದಾಗ, ಅದರ ಜೊತೆಯಲ್ಲಿರುವ ಹಣ್ಣುಗಳೂ ಬೇಗ ಹಣ್ಣಾಗಬಹುದು. ಇದನ್ನು ತಿಳಿದಿದ್ದರೆ ಬಾಳೆಹಣ್ಣುಗಳನ್ನು ಹೆಚ್ಚು ದಿನ ಸಂರಕ್ಷಿಸಲು ಸಹಾಯವಾಗುತ್ತದೆ. ಬೇಗ ಹಣ್ಣಾಗಬಾರದು ಎಂದರೆ, ಹಣ್ಣಾದ ಬಾಳೆಹಣ್ಣುಗಳನ್ನು ಉಳಿದವುಗಳಿಂದ…

  • ಪ್ರತಿಭಾ ಪತ್ರಿಕೆ – ಮೇ 2026

    ಸ್ಪರ್ಧಾ ವಿಭಾಗ ಈ ಸಂಚಿಕೆಯ ಸ್ಪರ್ಧೆಯನ್ನು ಚಿತ್ರ ಸಮೇತ ಬರೆದು ಕಳಿಸಿದವರು : ಶ್ರೀ ವಿಠ್ಠಲ ರಾವ್ .ಎಸ್ . ಬಹುಮಾನವನ್ನೂ ಅವರೇ ಕೊಡುತ್ತಾರೆ ಅವರಿಗೆ ಧನ್ಯವಾದಗಳು ಈ ಸಂಚಿಕೆಯ ಸ್ಪರ್ಧೆ : ಚಿತ್ರಗಳಿಗೆ ಶೀರ್ಷಿಕೆ ಬರೆಯುವುದು . ಈ ಕೆಳಗಿನ ಉದಾಹರಣೆ ನೋಡಿ ಇದಕ್ಕೆ ” ನಂಗುಂಟು ನಿಂಗಿಲ್ಲ ಪೆಪ್ಪೆಪ್ಪೆ “ ಅಥವಾ ” ನಾ ಗೆದ್ದೇ ನೇ ಸೋತೆ “ ಮುಂತಾದ ಅನೇಕ ರೀತಿ ಬರೆಯಬಹುದು . ಇದರಂತೆ , ಈ ಕೆಳಗಿನ 10…

One Comment

Leave a Reply

Your email address will not be published. Required fields are marked *