ಪ್ರತಿಭಾ ಪತ್ರಿಕೆ -ಜೂನ್ 2026

ಆಧ್ಯಾತ್ಮ ವಿಭಾಗ

ಆಧ್ಯಾತ್ಮ

ಮಂಕುತಿಮ್ಮನ ಕಗ್ಗ – ಭಾಗ -5-ಬರಹ :ಡಾ || ನಾಗೇಶ್ . ಎಲ್ .

ದಾಸರೋ ನಾವೆಲ್ಲ ಶುನಕನಂದದಿ ಜಗದ ।

ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ॥

ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು ।

ವಾಸನಾಕ್ಷಯ ಮೋಕ್ಷ – ಮಂಕುತಿಮ್ಮ ||

ನಾವೆಲ್ಲ ಆಸೆ ವ್ಯಾಮೋಹ ವಾಂಚೆಗಳಿಗೆ ದಾಸರಾಗಿದ್ದೇವೆ. ಜೀವನವೆಲ್ಲ ಆಸೆಗಳ ಹಿಂದೆ ಓಡುತ್ತಿರುತ್ತೇವೆ. ಆಸೆಗಳ ಒಂದು ನಿರಂತರ ಪಟ್ಟಿ ಸದಾ ಸಿದ್ಧವಾಗಿರುತ್ತದೆ. ಹೇಗೆ ನಾಯಿ ವಾಸನೆ ಬೀಸಿದ ದಿಕ್ಕಿನಲ್ಲಿ ವಾಸನೆಯನ್ನು ಅನುರಿಸಿ ಚಡಪಡಿಸುತ್ತದೆಯೋ ಹಾಗೆಯೇ ನಾವು ಸಹ ಸದಾ ಚಡಪಡಿಸುತ್ತಿರುತ್ತೇವೆ. ಆಸೆಗಳ ಬ್ಯಾಸ್ಕೆಟ್ ಎಂದು ಖಾಲಿಯಾಗುವುದಿಲ್ಲ .ಆಸೆಗಳೆಂಬ ಪಾಶಗಳು ಹೊರಗಿದ್ದಾವೆ .ಅಂದರೆ ನಾವು ಆಸೆ ಪಡುವ ವಿಷಯಗಳು ಸಾಮಗ್ರಿಗಳು ಬಾಹ್ಯ ಪ್ರಪಂಚದಲ್ಲಿದೆ. ಆ ಸಾಮಗ್ರಿಗಳಿಗೆ ತಮ್ಮ ಆಸೆಗಳೆಂಬ ಪಾಶಗಳು ಬಿಗಿದುಕೊಂಡಿವೆ. ಆದರೆ ಒಂದು ಸೂಕ್ಷ್ಮ ವಿಷಯವೆಂದರೆ ಈ ಪಾಶಗಳು ನಮ್ಮ ಒಳಗಿರುವ ಕೊಂಡಿಗಳಿಗೆ ತಗಲಿ ಹಾಕಿಕೊಳ್ಳುತ್ತವೆ. ಡಿವಿಜಿಯವರು ಇಲ್ಲಿ ತಿಳಿಸುವ ಮುಖ್ಯ ವಿಚಾರವೆಂದರೆ ಹೊರಗಿರುವ ವಸ್ತು ವಿಷಯ ಸಾಮಗ್ರಿಗಳು ತಮ್ಮ ಪಾಡಿಗೆ ತಾವರಲಿ ಅವುಗಳ ತಗಲು ಹಾಕಿಕೊಂಡಿರುವ ಪಾಶಗಳು ಇರಲಿ ಆದರೆ ಆ ಪಾಶಗಳು ನಮ್ಮೊಡನೆ ಬಂಧಿಸಲು ನೆರವಾಗುವ ಕೊಂಡಿಗಳು (hooks)ಆ ಕೊಂಡಿಗಳನ್ನು ನಾವು ಕಳಚಿ ಹಾಕಬೇಕು.
 ಅದನ್ನೇ ವೈರಾಗ್ಯ ಎಂದು ಕರೆಯುತ್ತಾರೆ .ಆಸೆಗಳ ಕ್ಷಯವೇ ಮೋಕ್ಷವೆಂದು ತಿಮ್ಮ ಗುರು ಹೇಳುತ್ತಾರೆ .ಬುದ್ಧದೇವ ಅದಕ್ಕೆ ಹೇಳಿದ್ದು ಆಶಯೇ ದುಃಖಕ್ಕೆ ಕಾರಣವೆಂದು.
 ಅದಕ್ಕೆ ಪೂರಕವಾದ ಮರುಳ ಮುನಿಯನ ಕಗ್ಗದ ಪದ್ಯದಿಂದ ನಾನು ಐದನೆಯ ಸಂಚಿಕೆಯ ಬರಹ ಮುಕ್ತಾಯ ಮಾಡುತ್ತೇನೆ .

ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ |
ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ ||
ಚಟ್ಟಕ್ಕೆ ನಿನ್ನನೇರಿಪ ಮುನ್ನ ನೀನಾಗಿ |
ಕಿತ್ತೆಸೆಯೊ ಕಂತೆಗಳ – ಮರುಳ ಮುನಿಯ ||


ಮಂಕುತಿಮ್ಮನ ಕಗ್ಗದ ಬಗ್ಗೆ ಉದಾಹರಣೆ ಸಹಿತ ಮಾತು : ಮಾತನಾಡಿರುವವರು : ಶ್ರೀಮತಿ ಸುಧಾಶ್ರೀನಾಥ್

ಕೆಳಗಿನ ಆಡಿಯೋ ಲಿಂಕ್ ಒತ್ತಿ ಕೇಳಿ

Similar Posts

  • ನೀರು ಏಕೆ ವಿಚಿತ್ರವಾಗಿ ವರ್ತಿಸುತ್ತದೆ?

    4°C ರಹಸ್ಯ ಸಾಮಾನ್ಯವಾಗಿ ಯಾವುದೇ ವಸ್ತುವನ್ನು ತಂಪು ಮಾಡಿದಂತೆ ಅದು ಕುಗ್ಗುತ್ತದೆ. ಆದರೆ ನೀರು ಮಾತ್ರ 4°C ಹತ್ತಿರ ಒಂದು ವಿಚಿತ್ರ ವರ್ತನೆ ತೋರಿಸುತ್ತದೆ. 4°C ವರೆಗೆ ತಂಪಾಗುವಾಗ ನೀರು ಕುಗ್ಗುತ್ತದೆ. ಆದರೆ 4°C ಗಿಂತ ಕೆಳಗೆ ಹೋದಾಗ ಮತ್ತೆ ನಿಧಾನವಾಗಿ ಹಿಗ್ಗಲು ಪ್ರಾರಂಭಿಸುತ್ತದೆ. ಇದೇ ನೀರಿನ ಒಂದು ಅದ್ಭುತ ಗುಣ. ನೀರಿನ ಉಷ್ಣಾಂಶ 4°C ಇದ್ದಾಗ ಅದರ ಸಾಂದ್ರತೆ ಗರಿಷ್ಠವಾಗಿರುತ್ತದೆ. ಆದ್ದರಿಂದ 4°C ನೀರು ಇತರ ನೀರಿಗಿಂತ ಹೆಚ್ಚು ಭಾರವಾಗಿದ್ದು ಕೆಳಕ್ಕೆ ಹೋಗುತ್ತದೆ. ಚಳಿಗಾಲದಲ್ಲಿ ಕೆರೆಯ…

  • ಚಿತ್ರಕಲೆ ವಿಭಾಗ

    ಶ್ರೀ ಜಯರಾಂ ಕೆ ವಿ ಅವರು ರಚಿಸಿರುವ ಚಿತ್ರಗಳು ಮತ್ತು ಕಿರು ಲೇಖನಗಳು ಶತಾವಧಾನಿ ಗಣೇಶನ ಭಾವಚಿತ್ರ. ಅವರು UVCE ಯಿಂದ ಎಂಜಿನಿಯರಿಂಗ್ ಮತ್ತು IISc ಯಿಂದ ME ಪದವಿ ಪಡೆದರು. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಳಿಗಾಗಿ ಅವರು ಡಾಕ್ಟರೇಟ್ ಪಡೆದರು. 1962 ರಲ್ಲಿ ಕೋಲಾರದಲ್ಲಿ ಜನಿಸಿದ ಅವರು ಅವಧಾನಿಯಾಗಿದ್ದು, ನೂರಾರು ಜ್ಞಾನವುಳ್ಳ ಭಾಗವಹಿಸುವವರನ್ನು ಏಕಕಾಲದಲ್ಲಿ ನಿಭಾಯಿಸಬಲ್ಲರು, ಅವರು ಅವರ ಆಲೋಚನೆಗಳನ್ನು ತೊಂದರೆಗೊಳಿಸಬಹುದು, ಗೊಂದಲಗೊಳಿಸಬಹುದು ಇತ್ಯಾದಿ. ಆದರೆ ಅವರನ್ನು ಸೋಲಿಸಲು ಅಥವಾ ದಾರಿ…

  • ಪ್ರತಿಭಾ ಪತ್ರಿಕೆ- ಅಕ್ಟೋಬರ್ 2026

    ಸಂಪಾದಕರ ಬರಹ ಸಂಪಾದಕರ ಬರಹ  ಅನೇಕ ಜನರು ಈ ಪತ್ರಿಕೆಯನ್ನು ಓದುತ್ತಿರುವುದು ಸಂತಸದ ಸಂಗತಿ.ಆದರೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದರಲ್ಲಿ ಕೆಲವೇ ಕೆಲವು ಮಂದಿ ಆಸಕ್ತಿ ತೋರುತ್ತಿದ್ದಾರೆ. ದಯವಿಟ್ಟು ಇನ್ನೂ ಹೆಚ್ಚು ಜನರು ಸ್ಪರ್ಧೆಗಳಲ್ಲಿ ಭಾಗವಹಿಸಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ .ಇದರಿಂದ ಪತ್ರಿಕೆಯನ್ನು ಇನ್ನೂ ಉತ್ತಮವಾಗಿ ಮಾಡಲು ಸಹಾಯವಾಗುತ್ತದೆ. ಈ ಸಲದ ಸ್ಪರ್ಧೆ ಕರ್ನಾಟಕ ರಾಜ್ಯ ಹಾಗೂ ಕನ್ನಡ ಭಾಷೆಗೆ ಸಂಬಂಧಪಟ್ಟಿದೆ ಹಾಗೂ ಸುಲಭವಾಗಿದೆ. ದಯವಿಟ್ಟು ಎಲ್ಲರೂ ಭಾಗವಹಿಸಿ ಮತ್ತು ಈ ಪತ್ರಿಕೆಯ…

  • ನಿಮಗಿದು ಗೊತ್ತೇ ?-ನವೆಂಬರ್ 2026 :

    ಬಾಳೆಹಣ್ಣುಗಳನ್ನು ಮನೆಯಲ್ಲಿ ಇಟ್ಟಾಗ ಒಂದು ವಿಷಯ ಗಮನಿಸಿರಬಹುದು. ಒಂದು ಬಾಳೆಹಣ್ಣು ಬೇಗ ಹಣ್ಣಾದರೆ, ಅದರ ಜೊತೆಯಲ್ಲಿರುವ ಉಳಿದ ಬಾಳೆಹಣ್ಣುಗಳೂ ಬೇಗ ಹಣ್ಣಾಗುತ್ತವೆ. ಏಕೆ ಹೀಗೆ? ಬಾಳೆಹಣ್ಣು ಹಣ್ಣಾಗುವಾಗ **ಎಥಿಲೀನ್** ಎಂಬ ಒಂದು ಅನಿಲವನ್ನು ಹೊರಬಿಡುತ್ತದೆ. ಈ ಅನಿಲವು ಹತ್ತಿರದಲ್ಲಿರುವ ಹಣ್ಣುಗಳೂ ಹಣ್ಣಾಗಲು ಸಹಾಯ ಮಾಡುತ್ತದೆ. ಆದ್ದರಿಂದ ಒಂದು ಹಣ್ಣು ಬೇಗ ಹಣ್ಣಾದಾಗ, ಅದರ ಜೊತೆಯಲ್ಲಿರುವ ಹಣ್ಣುಗಳೂ ಬೇಗ ಹಣ್ಣಾಗಬಹುದು. ಇದನ್ನು ತಿಳಿದಿದ್ದರೆ ಬಾಳೆಹಣ್ಣುಗಳನ್ನು ಹೆಚ್ಚು ದಿನ ಸಂರಕ್ಷಿಸಲು ಸಹಾಯವಾಗುತ್ತದೆ. ಬೇಗ ಹಣ್ಣಾಗಬಾರದು ಎಂದರೆ, ಹಣ್ಣಾದ ಬಾಳೆಹಣ್ಣುಗಳನ್ನು ಉಳಿದವುಗಳಿಂದ…

  • ಪ್ರತಿಭಾ ಪತ್ರಿಕೆ – ಜುಲೈ -2026

    ಸಂಪಾದಕರ ಬರಹ ಪ್ರಿಯ ಓದುಗರೇ ಈ ಸಲದ ಸಂಚಿಕೆಯನ್ನು , ಒಂದೇ ಉದ್ದನೆಯ ಪುಟದಲ್ಲಿ ಮಾಡಲಾಗಿದೆ. “ಈ ಸಂಚಿಕೆಯಲ್ಲಿ” ಎಂಬ ವಿಭಾಗದಲ್ಲಿರುವ ಎಲ್ಲ ಹೆಡ್ಡಿಂಗ್ ಗಳನ್ನು ನೀವು ಒತ್ತಿ, ನೇರವಾಗಿ ಯಾವುದೇ ವಿಭಾಗಕ್ಕೆ ಹೋಗಬಹುದು ಮತ್ತು ಬಲಗಡೆ ಮೊಬೈಲ್ನ ಕೆಳಗಡೆ ಕಾಣುವ ಕೆಂಪುಬಣ್ಣದ ಆರೋ ಮಾರ್ಕ್ ಒತ್ತಿ ದರೆ ಮತ್ತೆ ಅದು ಮುಖಪುಟಕ್ಕೆ ಹೋಗುತ್ತದೆ . ಹೀಗೆ ಮಾಡದೆ ನೀವು ಸ್ಕ್ರಾಲ್ ಮಾಡುತ್ತಾ ಪೂರ್ತಿ ಸಂಚಿಕೆಯನ್ನು ಕೂಡ ಓದಬಹುದು. ಈ ಸಲದ ಕೈಬರಹದ ಸ್ಪರ್ಧೆ ಬಹಳ ಸುಲಭವಾಗಿದೆ…

  • ಪ್ರತಿಭಾ ಪತ್ರಿಕೆ – ಸೆಪ್ಟಂಬರ್ 2026

    ಸಂಪಾದಕರ ಬರಹ ಸಂಪಾದಕರ ಬರಹ ಪ್ರಿಯ ಓದುಗರೇ , 35 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ನನಗೆ , ಈ ಸಂಚಿಕೆಯನ್ನು ಶಿಕ್ಷಕರ ದಿನದಂದು , ಈ ಲೇಖನದೊಂದಿಗೆ ಪ್ರಾರಂಭ ಮಾಡುವ ಆಸೆಯೂ ಸಹಜವಾಗಿಯೇ ಮೂಡಿದೆ. ಶಿಕ್ಷಕರು — ಭವಿಷ್ಯಕ್ಕೆ ದಾರಿ ತೋರುವ ದಾರಿದೀಪಗಳು.“ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶಿಕ್ಷಣವೇ ತಳಹದಿ.” ಒಂದು ಸಮಾಜದ ಪ್ರಗತಿಯ ವೇಗವನ್ನು ಅಳೆಯಬೇಕಾದರೆ, ಆ ಸಮಾಜ ತನ್ನ ಶಿಕ್ಷಣಕ್ಕೆ ನೀಡುವ ಮಹತ್ವವನ್ನು ನೋಡಬೇಕು. ಜ್ಞಾನ, ವಿವೇಕ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ…

One Comment

Leave a Reply

Your email address will not be published. Required fields are marked *