ಸ್ಪರ್ಧಾ ವಿಭಾಗ

ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ

10 ರಿಂದ 16 ವರ್ಷ ಒಳಗಿನ ಮಕ್ಕಳ ವಿಭಾಗ

10 ವರ್ಷದ ಒಳಗಿನ ಮಕ್ಕಳ ವಿಭಾಗ

ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ

– ಬರೆದು ಕಳಿಸಲು ಕೊನೆಯ ದಿನಾಂಕ 25/04/2026.

– A4 ಹಾಳೆ ಯಲ್ಲಿ ಬರೆದು, ಫೋಟೋ ತೆಗೆದು ಕಳಿಸಿ .

– ನೀವು ಬರೆದ ಚಿತ್ರದ ಮೇಲ್ಭಾಗದಲ್ಲಿ, ಹೆಸರು, ವಯಸ್ಸು ಹಾಗು ಸಂಕ್ಷಿಪ್ತ ವಿಳಾಸ ಬರೆದು ಕಳಿಸಿ

ನನ್ನ ನೆಚ್ಚಿನ ವ್ಯಕ್ತಿ ಸ್ಪರ್ಧೆಯ ಉತ್ತರಗಳು

ಶ್ರೀಮತಿ ಸುಮಾ ಆನಂದ್

ನನ್ನ ನೆಚ್ಚಿನ ವ್ಯಕ್ತಿ ನಾನು ಬರೆಯುತ್ತಿರುವುದು ನನ್ನ ಬಾಲ್ಯದ, ಅಂದರೆ ಸುಮಾರು 40 ವರ್ಷದ ಹಿಂದಿನ ಟೀಚರ್ ಬಗ್ಗೆ. ನನ್ನ ಮಿಡಲ್ ಸ್ಕೂಲ್ ಟೀಚರ್ “ಗುಣಸಾಗರಿ” ಅವರ ಬಗ್ಗೆ.
 ಇವರ ಹೆಸರಿಗೆ ತಕ್ಕಂತೆ ಒಳ್ಳೆಯ ಗುಣಗಳ ಸಾಗರ. ನಾನು ಓದಿದ್ದು, ಶ್ರೀರಂಗಪಟ್ಟಣದ ಚಿಕ್ಕ ಸರ್ಕಾರಿ ಶಾಲೆಯಲ್ಲಿ .ಅಲ್ಲಿ ಎಲ್ಲದಕ್ಕೂ ಸೀಮಿತಾವಕಾಶ. ಆದರೆ ಇವರು ಆ ಸೀಮಿತ ಅವಕಾಶದಲ್ಲೇ ನಮಗೆ ಪಾಠ, ಆಟ, ಜೊತೆಗೆ ನೃತ್ಯ, , ನಾಟಕ , ಹಾಡುಗಾರಿಕೆಗೂ ಅವಕಾಶ ಕೊಟ್ಟಿದ್ದರು.
 ನಾನು ಆರನೇ ತರಗತಿಯಲ್ಲಿದ್ದಾಗ ಶಾಲೆಯ ವಾರ್ಷಿಕೋತ್ಸವಕ್ಕೆ “ಕಾಡು ಕುದುರೆ ಓಡಿ ಬಂದಿತ್ತಾ ” ಹಾಡಿಗೆ ನೃತ್ಯ ಮಾಡಬೇಕಾಗಿತ್ತು . ಮೈಸೂರಿನಿಂದ ನೃತ್ಯ ಸಂಯೋಜಕರನ್ನು (ಅಂದರೆ ಕೊರಿಯೋಗ್ರಾಫರ್ ) ಕರೆಸಿದರು. ಆಗ ಇದು ತುಂಬಾ ದೊಡ್ಡ ವಿಷಯ ಆಗಿತ್ತು . ನಮ್ಮ ನೃತ್ಯ ಚೆನ್ನಾಗಿ ಮೂಡಿಬಂದಿತು .ನಮಗೆಲ್ಲರಿಗೂ ಒಳ್ಳೆಯ ಹೆಸರು ತಂದು ಕೊಟ್ಟಿತು.

ಆಗ ಆಕಾಶವಾಣಿಯಲ್ಲಿ ನಮ್ಮ ಹೆಸರು ಕೇಳುವುದೇ ಒಂದು ಸಂತೋಷದ ವಿಷಯ. ಆದರೆ ಇವರು ತಮ್ಮ ಪ್ರಯತ್ನದಿಂದ, ನಮ್ಮ 10 ಜನರನ್ನು ಮೈಸೂರಿಗೆ ಕರೆದುಕೊಂಡು ಹೋಗಿ, ಆಕಾಶವಾಣಿಯಲ್ಲಿ ಕಾರ್ಯಕ್ರಮ ಕೊಡಿಸಿದರು. ಕಾರ್ಯಕ್ರಮ ಪ್ರಸಾರವಾದ ದಿನ, ಎಲ್ಲರ ಮನೆಯಲ್ಲೂ ಹಬ್ಬದ ವಾತಾವರಣ .ಎಲ್ಲರೂ ರೇಡಿಯೋ ಮುಂದೆ ಕುಳಿತು, ನಮ್ಮ ಧ್ವನಿಯನ್ನು ರೇಡಿಯೋದಲ್ಲಿ ಕೇಳಿ ಪುಳಿಕ್ಕಿತಗೊಂಡೆವು.
 ಹೀಗೆ ಮೂರು ವರ್ಷ ( 5 ರಿಂದ 7 ನೇ ತರಗತಿ ) ತುಂಬಾ ಚೆನ್ನಾಗಿ ಕಳೆಯಿತು. ಈಗಲೂ ಇದನ್ನು ನೆನೆಸಿಕೊಂಡರೆ ಮನಸ್ಸು ಮುದಗೊಳ್ಳುತ್ತದೆ. ಅವರ ಮುಖ ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ .

ಧನ್ಯವಾದಗಳು ಟೀಚರ್❤️

ಶ್ರೀಮತಿ ಗೌರಿ ಮೋಹನ್ ಭಟ್

“ಮಾತೃದೇವೋಭವ, ಪಿತೃದೇವೋಭವ”. 
ತಂದೆ ತಾಯಿ ಈ ಜಗತ್ತಿನಲ್ಲಿ ನಮಗೆ ದೇವರು ನೀಡಿದ ಅತಿ ದೊಡ್ಡ ವರ.
ತಂದೆ-ತಾಯಿ ಪ್ರೀತಿ,ತ್ಯಾಗ,ವಾತ್ಸಲ್ಯ,ಸಂಬಂಧ,ಸಹನೆ, ಸೌಜನ್ಯತೆ ಮತ್ತು ಮಾರ್ಗದರ್ಶನವನ್ನು ತೋರುಪಡಿಸಿದ ಆದರ್ಶ ವ್ಯಕ್ತಿಗಳು. ನಿಷ್ಕಲ್ಮಶ, ನಿಸ್ವಾರ್ಥ ಪ್ರೀತಿಯಿಂದ ಮಕ್ಕಳನ್ನು ಸಲಹುತ್ತಾರೆ. ಜೀವನದ ಮೊದಲ ಗುರುಗಳು ಮತ್ತು ಆದಾರಸ್ತಂಬಗಳು. ತಾಯಿ ಪ್ರೀತಿಯ ಸಿಹಿ ಸಾಗರದಂತೆ, ತಂದೆ ಬೆನ್ನೆಲುಬಾಗಿ ನಿಲ್ಲುವ ಧೈರ್ಯದ ಸಂಕೇತ. ಅವರ ಆಶೀರ್ವಾದವಿಲ್ಲದೆ ಜೀವನದಲ್ಲಿ ಯಶಸ್ಸು ಅಸಾಧ್ಯ. ಜನ್ಮ ನೀಡಿ, ಸಾಕಿ, ಸಲಹಿ, ಸುಸಂಸ್ಕೃತರನ್ನಾಗಿ ಬೆಳೆಸುವ ತಂದೆ-ತಾಯಿ ಋಣವನ್ನು ಏಳು ಜನ್ಮಗಳೆತ್ತಿದರೂ ತೀರಿಸಲು ಸಾಧ್ಯವಿಲ್ಲ. ವೃದ್ಯಾಪ್ಯದಲ್ಲಿ ತಂದೆ-ತಾಯಿಯನ್ನು ಪ್ರೀತಿ, ಗೌರವ ಕೊಟ್ಟು ಆತ್ಮೀಯದಿಂದಿರಿ. 

ಈ ಎರಡೂ ಉತ್ತರಗಳನ್ನು ಪರಿಶೀಲಿಸಿ , ಶ್ರೀಮತಿ ಸುಮಾ ಆನಂದ್ ಅವರಿಗೆ ಬಹುಮಾನ ನೀಡಲಾಗಿದೆ. ಅವರಿಗೆ ಅಭಿನಂದನೆಗಳು .

ಕಳೆದ ಬಾರಿಯ ಪದಬಂಧ ಉತ್ತರಗಳು

A

1) ಪರಮಾವಧಿ 2)ನಾರದ 3) ವಿವರ್ತ

B

1) ಗಾಳಿಗೋಪುರ 2)ಪೀಳಿಗೆ 3) ಸಂಪುಟ

ಸರಿ ಉತ್ತರ ಬರೆದವರು :

1) ಶ್ರೀಮತಿ ಸುಬ್ಬಲಕ್ಷ್ಮಿ ಎಸ್ ರಾವ್

2) ಶ್ರೀಮತಿ ಸೌಮ್ಯ ನಾಗರಾಜ್

ಇಬ್ಬರಿಗೂ ಅಭಿನಂದನೆಗಳು

ಈ ಸಂಚಿಕೆಯ ಪದಬಂಧ – ಡಾII ಚಂದ್ರಶೇಖರ ರಾವ್

ಸುಳುಹುಗಳು :

1) ತೀರ ದರಿದ್ರ

2)ತಡಕಾಡು, ಅರಸು.

3) ಕಿ ಚೀಲ , ಕ್ಷೌರಿಕನ ಚೀಲ

================

ಸುಳುಹುಗಳು :

1) ಬಹುಮಾನ , ಉಡುಗೆರೆ

2) ಚಿನ್ನದ ತಂತಿ, ಜರತಾರಿ , ಕಂಠಾಭರಣ

3) ವೈದ್ಯ

Similar Posts

  • ಪ್ರತಿಭಾ ಪತ್ರಿಕೆ -ಜೂನ್ 2026

    ಈ ಸಂಚಿಕೆಯಲ್ಲಿ : 1. ಸಂಪಾದಕರ ಬರಹ 2. ಸ್ಪರ್ಧಾ ವಿಭಾಗ 2.1. ಈ ಸಂಚಿಕೆಯ ಸ್ಪರ್ಧೆ 2.2. ಕಳೆದ ಸಂಚಿಕೆಯ ಸ್ಪರ್ಧೆಯ ಉತ್ತರಗಳು 2.3. ಪದಬಂಧ 2.4. ಕಳೆದ ಸಂಚಿಕೆಯ ಪದಬಂಧದ ಉತ್ತರಗಳು 3. ಅಧ್ಯಾತ್ಮ ವಿಭಾಗ 3.1. ಮಂಕುತಿಮ್ಮನ ಕಗ್ಗ – ಭಾಗ 5- ಬರಹ :ಡಾ || ನಾಗೇಶ್ . ಎಲ್. 3.2. ಮಂಕುತಿಮ್ಮನ ಕಗ್ಗದ ಬಗ್ಗೆ ಉದಾಹರಣೆ ಸಹಿತ ಮಾತು: ಮಾತನಾಡಿರುವವರು: ಶ್ರೀಮತಿ ಸುಧಾಶ್ರೀನಾಥ್ 4. ಕಥೆ, ಕವನ ವಿಭಾಗ 4.1….

  • ನೀರು ಏಕೆ ವಿಚಿತ್ರವಾಗಿ ವರ್ತಿಸುತ್ತದೆ?

    4°C ರಹಸ್ಯ ಸಾಮಾನ್ಯವಾಗಿ ಯಾವುದೇ ವಸ್ತುವನ್ನು ತಂಪು ಮಾಡಿದಂತೆ ಅದು ಕುಗ್ಗುತ್ತದೆ. ಆದರೆ ನೀರು ಮಾತ್ರ 4°C ಹತ್ತಿರ ಒಂದು ವಿಚಿತ್ರ ವರ್ತನೆ ತೋರಿಸುತ್ತದೆ. 4°C ವರೆಗೆ ತಂಪಾಗುವಾಗ ನೀರು ಕುಗ್ಗುತ್ತದೆ. ಆದರೆ 4°C ಗಿಂತ ಕೆಳಗೆ ಹೋದಾಗ ಮತ್ತೆ ನಿಧಾನವಾಗಿ ಹಿಗ್ಗಲು ಪ್ರಾರಂಭಿಸುತ್ತದೆ. ಇದೇ ನೀರಿನ ಒಂದು ಅದ್ಭುತ ಗುಣ. ನೀರಿನ ಉಷ್ಣಾಂಶ 4°C ಇದ್ದಾಗ ಅದರ ಸಾಂದ್ರತೆ ಗರಿಷ್ಠವಾಗಿರುತ್ತದೆ. ಆದ್ದರಿಂದ 4°C ನೀರು ಇತರ ನೀರಿಗಿಂತ ಹೆಚ್ಚು ಭಾರವಾಗಿದ್ದು ಕೆಳಕ್ಕೆ ಹೋಗುತ್ತದೆ. ಚಳಿಗಾಲದಲ್ಲಿ ಕೆರೆಯ…

  • ನಿಮಗಿದು ಗೊತ್ತೇ ?-ನವೆಂಬರ್ 2026 :

    ಬಾಳೆಹಣ್ಣುಗಳನ್ನು ಮನೆಯಲ್ಲಿ ಇಟ್ಟಾಗ ಒಂದು ವಿಷಯ ಗಮನಿಸಿರಬಹುದು. ಒಂದು ಬಾಳೆಹಣ್ಣು ಬೇಗ ಹಣ್ಣಾದರೆ, ಅದರ ಜೊತೆಯಲ್ಲಿರುವ ಉಳಿದ ಬಾಳೆಹಣ್ಣುಗಳೂ ಬೇಗ ಹಣ್ಣಾಗುತ್ತವೆ. ಏಕೆ ಹೀಗೆ? ಬಾಳೆಹಣ್ಣು ಹಣ್ಣಾಗುವಾಗ **ಎಥಿಲೀನ್** ಎಂಬ ಒಂದು ಅನಿಲವನ್ನು ಹೊರಬಿಡುತ್ತದೆ. ಈ ಅನಿಲವು ಹತ್ತಿರದಲ್ಲಿರುವ ಹಣ್ಣುಗಳೂ ಹಣ್ಣಾಗಲು ಸಹಾಯ ಮಾಡುತ್ತದೆ. ಆದ್ದರಿಂದ ಒಂದು ಹಣ್ಣು ಬೇಗ ಹಣ್ಣಾದಾಗ, ಅದರ ಜೊತೆಯಲ್ಲಿರುವ ಹಣ್ಣುಗಳೂ ಬೇಗ ಹಣ್ಣಾಗಬಹುದು. ಇದನ್ನು ತಿಳಿದಿದ್ದರೆ ಬಾಳೆಹಣ್ಣುಗಳನ್ನು ಹೆಚ್ಚು ದಿನ ಸಂರಕ್ಷಿಸಲು ಸಹಾಯವಾಗುತ್ತದೆ. ಬೇಗ ಹಣ್ಣಾಗಬಾರದು ಎಂದರೆ, ಹಣ್ಣಾದ ಬಾಳೆಹಣ್ಣುಗಳನ್ನು ಉಳಿದವುಗಳಿಂದ…

  • ಪ್ರತಿಭಾ ಪತ್ರಿಕೆ- ಅಕ್ಟೋಬರ್ 2026

    ಸಂಪಾದಕರ ಬರಹ ಸಂಪಾದಕರ ಬರಹ  ಅನೇಕ ಜನರು ಈ ಪತ್ರಿಕೆಯನ್ನು ಓದುತ್ತಿರುವುದು ಸಂತಸದ ಸಂಗತಿ.ಆದರೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದರಲ್ಲಿ ಕೆಲವೇ ಕೆಲವು ಮಂದಿ ಆಸಕ್ತಿ ತೋರುತ್ತಿದ್ದಾರೆ. ದಯವಿಟ್ಟು ಇನ್ನೂ ಹೆಚ್ಚು ಜನರು ಸ್ಪರ್ಧೆಗಳಲ್ಲಿ ಭಾಗವಹಿಸಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ .ಇದರಿಂದ ಪತ್ರಿಕೆಯನ್ನು ಇನ್ನೂ ಉತ್ತಮವಾಗಿ ಮಾಡಲು ಸಹಾಯವಾಗುತ್ತದೆ. ಈ ಸಲದ ಸ್ಪರ್ಧೆ ಕರ್ನಾಟಕ ರಾಜ್ಯ ಹಾಗೂ ಕನ್ನಡ ಭಾಷೆಗೆ ಸಂಬಂಧಪಟ್ಟಿದೆ ಹಾಗೂ ಸುಲಭವಾಗಿದೆ. ದಯವಿಟ್ಟು ಎಲ್ಲರೂ ಭಾಗವಹಿಸಿ ಮತ್ತು ಈ ಪತ್ರಿಕೆಯ…

  • ಪ್ರತಿಭಾ ಪತ್ರಿಕೆ – ಜುಲೈ -2026

    ಸಂಪಾದಕರ ಬರಹ ಪ್ರಿಯ ಓದುಗರೇ ಈ ಸಲದ ಸಂಚಿಕೆಯನ್ನು , ಒಂದೇ ಉದ್ದನೆಯ ಪುಟದಲ್ಲಿ ಮಾಡಲಾಗಿದೆ. “ಈ ಸಂಚಿಕೆಯಲ್ಲಿ” ಎಂಬ ವಿಭಾಗದಲ್ಲಿರುವ ಎಲ್ಲ ಹೆಡ್ಡಿಂಗ್ ಗಳನ್ನು ನೀವು ಒತ್ತಿ, ನೇರವಾಗಿ ಯಾವುದೇ ವಿಭಾಗಕ್ಕೆ ಹೋಗಬಹುದು ಮತ್ತು ಬಲಗಡೆ ಮೊಬೈಲ್ನ ಕೆಳಗಡೆ ಕಾಣುವ ಕೆಂಪುಬಣ್ಣದ ಆರೋ ಮಾರ್ಕ್ ಒತ್ತಿ ದರೆ ಮತ್ತೆ ಅದು ಮುಖಪುಟಕ್ಕೆ ಹೋಗುತ್ತದೆ . ಹೀಗೆ ಮಾಡದೆ ನೀವು ಸ್ಕ್ರಾಲ್ ಮಾಡುತ್ತಾ ಪೂರ್ತಿ ಸಂಚಿಕೆಯನ್ನು ಕೂಡ ಓದಬಹುದು. ಈ ಸಲದ ಕೈಬರಹದ ಸ್ಪರ್ಧೆ ಬಹಳ ಸುಲಭವಾಗಿದೆ…

  • ಪ್ರತಿಭಾ ಪತ್ರಿಕೆ- ಆಗಸ್ಟ್ -2026

    ಸಂಪಾದಕರ ಬರಹ ಪ್ರಿಯ ಓದುಗರೇ ,ಕಳೆದ ಸಂಚಿಕೆಯಲ್ಲಿ ಕೈಬರಹದ ಪ್ರಶ್ನೆ ಬಹಳ ಸುಲಭವಾಗಿತ್ತು. ಆದರೂ ಕೇವಲ ಒಬ್ಬರೇ ಒಬ್ಬರು ಬರೆದು ಕಳಿಸಿರುವುದು ಸ್ವಲ್ಪ ಬೇಸರ ತಂದಿದೆ. ಈ ಸಂಚಿಕೆಯಿಂದಲಾದರೂ. ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಯತ್ನಿಸಿ. ಡಾಕ್ಟರ್ ಚಂದ್ರಶೇಖರ್ ರಾವ್ ಅವರು ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೀವು ನಿಮ್ಮ ಅಭಿಪ್ರಾಯಗಳು ವಿಭಾಗದಲ್ಲಿ ನೋಡಬಹುದು. ಕಳೆದ ಸಂಚಿಕೆಯಲ್ಲಿ ಬಹಳ ಓದುಗರು ಡಾಕ್ಟರ್ ನಾಗೇಶ್ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಡಾಕ್ಟರ್ ನಾಗೇಶ್…

Leave a Reply

Your email address will not be published. Required fields are marked *