ಕಥೆ , ಕವನ ವಿಭಾಗ

ಕಥೆ : ನನ್ನ ಮೊದಲ ಕಾರು
ಬರಹ : ಶ್ರೀ ಜಯರಾಂ ಎ ಎಸ್

ಇದು ನಾನು ನಿಮಗೆ ಕೊಟ್ಟಿದ್ದ 2 ಸಾಲು . ಆದರೆ ಇದು ಸುಮಾರು 40 ವರ್ಷಗಳ ಹಿಂದಿನ ಘಟನೆ ಎಂದು ಹೇಳಿರಲಿಲ್ಲ . ನಮ್ಮ ಬಡಾವಣೆಯ ಅನೇಕರು ಉತ್ತರ ಕಳಿಸಿದದೀರಿ ಅವನ್ನು ಇಲ್ಲಿ ಹಾಕಿ, ನಂತರ ಘಟನೆಯನ್ನು ಬರೆಯುವೆ.
ಶ್ರೀ ಜಯರಾಂ ಕೆ ವಿ
ಗಾಡಿಯನ್ನು ಪಕ್ಕಕ್ಕೆ ಸರಿಸಿ ಮಳೆ ನಿಲ್ಲುವತನಕ ಕಾದು ಮೊಬೈಲ್ ಲೈಟ್ ಹಿಡಿದು ನಿಧಾನವಾಗಿ ಮನೆ ಸೇರಿಕೊಳ್ಳುವುದು.
ಶ್ರೀ ಅನಿಲ್ ಕುಮಾರ್
ಮೊಬೈಲ್ ಆಪ್ ತೆಗೆದೆ, ಹತ್ತಿರದ EV ಚಾರ್ಜಿಂಗ್ ಯೂನಿಟ್ ನೋಡಿದೆ. ಸಮೀಪದಲ್ಲೇ EV ಚಾರ್ಜಿಂಗ್ ಯೂನಿಟ್ ಇತ್ತು. ಡ್ರೈವ್ ಮಾಡಿ ಹೋದೆ. ಚಾರ್ಜ್ ಮಾಡಿದೆ. ಎಲ್ಲವೂ ಸರಿಯಾಗಿ ನಡೆಯಿತು.😀
ಶ್ರೀ ರಾಮಚಂದ್ರ ನಾಡಿಗ್
ಯಾವುದಾದರೂ ಸುರಕ್ಷಿತ ಕಟ್ಟಡದ ಹತ್ತಿರ ನಿಲ್ಲಿಸಿ.ಮಳೆ ನಿಂತ ಮೇಲೆ ಮುಂದಿನ ವ್ಯವಸ್ಥೆ ಮಾಡುವುದು.
ಶ್ರೀಮತಿ ಗೀತಾ ರಾಮಚಂದ್ರ
ಕಾರನ್ನು ಪಕ್ಕಕ್ಕೆ(ಅಂದರೆ ರೋಡನ್ನು ಬಿಟ್ಟು) ಮಳೆ ನಿಲ್ಲುವ ವರೆಗೆ, ಮತ್ತು ಬೀದಿ ದೀಪ ಇದ್ದು ಕರೆಂಟ್ ಇಲ್ಲದಿದ್ದರೆ(because there is no clarity about ಬೀದಿ ದೀಪ) ಬರುವವರೆಗೆ wait ಮಾಡಿ,or ಬೀದಿ ದೀಪವೇ ಇಲ್ಲ ದಿದ್ದರೆ ಬೆಳಕು ಹರಿಯುವ ತನಕ ಕಾರಿನಲ್ಲಿ ಮಲಗಿ ನಂತರ ತಲುಪಬೇಕಾದ ಜಾಗದ ಕಡೆ ಪ್ರಯಾಣ ಮುಂದುವರಿಕೆ
ಅಥವಾ ಪಕ್ಕದಲ್ಲಿ ಕುಳಿತಿದ್ದ ಸಹಧರ್ಮಿಣಿ ಒಂದು ಕೈಲಿ ಸೆರಗಿನ ತುದಿಯಿಂದ wiper ಒರೆಸುತ್ತಾ ಇನ್ನೊಂದು ಕೈಲಿ candle or battery ಹಿಡಿದರೆ romantic candle light driving.
ಶ್ರೀ ರಾಘವನ ಎಸ್ ವಿ
ಈ ಬೇಸಿಗೆಯಲ್ಲಿ ಭಾರೀ ಮಳೆ. ವಾಹ್, ಮಳೆಯಲ್ಲಿ ನೆನೆಯುತ್ತಾ ಮಡಿ ಆನಂದಿಸಿ.
ಕಾರನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿ, ಅದನ್ನು ಲಾಕ್ ಮಾಡಿ ಮತ್ತು ಮಳೆ ಹನಿಗಳೊಂದಿಗೆ ಏಕಕಾಲದಲ್ಲಿ ಶಿಳ್ಳೆ ಹೊಡೆಯುತ್ತಾ ಮನೆಗೆ ಹಿಂತಿರುಗಿ.
ಶ್ರೀ ಮಹಂತೇಶ್
ಮಳೆಯಲ್ಲಿ ವಾಹನ ಚಲಾಯಿಸುವುದು ಅಪಾಯವೆಂದು ಅರಿತ,ರಸ್ತೆಯ ಬದಿಗೆ ಗಾಡಿಯನ್ನು ನಿಲ್ಲಿಸಿ ಹ್ಯಾಜಾರ್ಡ್ ಲೈಟ್ ಆನ್ ಮಾಡಿದನು. ಮಳೆ ನಿಲ್ಲುವವರೆಗೆ ಕಾಯುತ್ತಾ ಅಲ್ಲೇ ವಿಶ್ರಮಿಸಲು ನಿರ್ಧರಿಸಿದನು.
ಶ್ರೀಮತಿ ರಾಜೇಶ್ವರಿ ನಾಗರಾಜ್

ನಡೆದ ಘಟನೆ
ಸುಮಾರು ವರ್ಷಗಳ ಹಿಂದೆ ನನ್ನ ಹತ್ತಿರ ಒಂದು ಫೀಯಿಟ್ ಕಾರು ಇತ್ತು. ಅದು ನನ್ನ ಮೊದಲ ಕಾರು . ಆ ಕಾಲದಲ್ಲಿ ಹೊಸ ಹೊಸ ಕಾರುಗಳು ಯಾವುದು ಜಾಸ್ತಿ ಇರಲಿಲ್ಲ. ಆ ಕಾರು ಮಾರ್ಗ ಮಧ್ಯದಲ್ಲಿ ಒಂದೊಂದು ಸಲ ಕೆಟ್ಟೋಗ್ತಾಯಿತ್ತು. ಆದರೂ ತುಂಬಾ ಚೆನ್ನಾಗಿ ಓಡುತ್ತಾ ಇತ್ತು.

ಇಲ್ಲಿಂದ ಸುಮಾರು ಒಂದೈದು ಕಿಲೋಮೀಟರ್ ದೂರದಲ್ಲಿರೋ ನಮ್ ಮಾವನ ಮನೆಗೆ ಹೋಗುವಷ್ಟೊತ್ತಿಗೆ ಒಂದು ಸಲಿ ಅದನ್ನ ನಿಲ್ಸಿ ಕಾರ್ಬೊ ರೇಟರ್ ಕ್ಲೀನ್ ಮಾಡಿ ಅಲ್ಲಿಂದ ಮುಂದಕ್ಕೆ ಹೋಗಬೇಕಾಗುತ್ತಿತ್ತು. ಆ ಕಾಲದಲ್ಲಿ ಮೊಬೈಲ್ ಫೋನ್ ಇರಲ್ಲಿಲ್ಲ .ಅಷ್ಟ್ರೊಳಗೆ ನಮ್ಮ ತಂದೆ “ಅಲ್ಲಿ ನನ್ನ ಮಗ -ಸೊಸೆ ಬಂದರೇ ? ” ಎಂದು ಒಂದು ಸಾರಿ ನನ್ನ ಮಾವನವರಿಗೆ ಲ್ಯಾಂಡ್ ಲೈನ್ ನಲ್ಲಿ ಫೋನ್ ಮಾಡಿರೂರು . ಯಾಕೆಂದ್ರೆ ಅದು ಅಷ್ಟು ಕೆಡುತ್ತೆ ಅಂತ ಗೊತ್ತಿತ್ತು.ಆ ಕಾರ್ ಓಡಿಸಿದ್ದರಿಂದಲೇ ನನಗೆ ಕಾರಿನಲ್ಲಿ ಯಾವೆಲ್ಲ ಇಂಜಿನ್ ಪಾರ್ಟ್ಸ್ ಗಳು ಇರುತ್ತವೆ, ಏನೇನು ಮಾಡುತ್ತವೆ ಎಂದು ಸರಿಯಾಗಿ ತಿಳಿದಿದ್ದು.
ನಮ್ಮಯದೊಂದೇ ಅಲ್ಲ , ಆ ಕಾಲದ ಕಾರುಗಳು ಇದ್ದದ್ದೇ ಹೇಗೆ .
ನನ್ನ ತಂದೆಯ ಕಾರು !
ಇದೂ ಕೂಡ ಫಿಯೆಟ್ ಕಾರು , ಇದರ ಘಟನೆಗಳು ಇನ್ನೂ ಸ್ವರಸ್ಯವಾಗಿದೆ . ಅದರ ಎರಡೂ ಸಾಲುಗಳೇ ನಾನು ನಿಮಗೆ ಕೊಟ್ಟದ್ದು .ಬೆಂಗಳೂರಿಂದ ಮೈಸೂರಿಗೆ ಅನೇಕ ಸಲ ಆ ಕಾರಿನಲ್ಲಿ ನಾವು ಹೋಗಿದ್ದೇವೇ . ಟೈರ್ ಪಂಚರ್ ಆಗಿ ಬೇರೆ ಹಾಕುವುದು ,ಕಾರ್ಬರೇಟರ್ ಕ್ಲೀನ್ ಮಾಡುವುದು, ದಾರಿ ದಾರಿಯಲ್ಲಿ ಕೂಲಿಂಗ್ ಕೊಡುವುದು ಇವೆಲ್ಲ ಬಹಳ ಮಜಾ ತರುತ್ತಿತ್ತು. ನಮಗೂ ಅಲ್ಲಲ್ಲಿ ಎಳನೀರು ಕುಡಿಯುವುದು ತಿಂಡಿ ತಿನ್ನುವುದಕ್ಕೆ ಸಹಾಯ ಆಗುತ್ತಿತ್ತು.
40 ವರ್ಷದ ಹಿಂದಿನ ಘಟನೆ :
ಒಮ್ಮೆ ಮೈಸೂರಿಗೆ ಹೋದಾಗ ರಾತ್ರಿ ಆಗಿತ್ತು. ಅಲ್ಲಿ ,ಮಳೆ ಸುರಿಯುತ್ತಿದ್ದ ಕಾರಣಕ್ಕಾಗಿ ಕರೆಂಟು ಹೊರಟು ಹೋಗಿತ್ತು. ಅದೇ ಸಮಯಕ್ಕೆ ಸರಿಯಾಗಿ ನಮ್ಮ ಕಾರಿನ ಹೆಡ್ ಲೈಟ್ ಗಳು ಕೆಲಸ ಮಾಡೋದು ನಿಲ್ಲಿಸಿ ಬಿಟ್ಟಿತ್ತು.

ರಸ್ತೆಯೇ ಕಾಣದಾಯಿತು . ದಾರಿ ಕಾಣದಾಗಿದೆ ಏನು ಮಾಡಲಿ ? ಎಂದು ಯೋಚಿಸುತ್ತಿದ್ದಾಗ :
ನನ್ನ ತಮ್ಮ ಗೋವಿಂದ , ದೊಡ್ಡ ಬ್ಯಾಟರಿ ಹಿಡಿದು ಗಾಜಿನ ಮೂಲಕ ಹೊರಗಡೆ ರಸ್ತೆಗೆ ಬಿಡುತ್ತಿದ್ದನು. ನಾವು ಅಂತಹ ಬ್ಯಾಟರಿಗಳನ್ನು ಕಾರು ಕೆಟ್ಟು ಹೋಗುತ್ತೆ ಅಂತ ತಿಳಿದೇನೆ ಅದರಲ್ಲಿ ತೆಗೆದುಕೊಂಡು ಹೋಗುತ್ತಿದ್ದೆವು.
ವೈಪರ್ ಕೂಡ ಕೆಟ್ಟುಹೋಯಿತು !
ಆಗ , ವೈಪರ್ ಗೆ ಮೂಟೆ ಹುರಿಕಟ್ಟಿ ಅದನ್ನು ಕೈ ಇಂದಲೇ ಚಲಿಸುವಂತೆ ಮಾಡಿದ ಸನ್ನಿವೇಶವನ್ನು ವಿವರವಾಗಿ ಮುಂದೆ ನನ್ನ ತಂಗಿ, ಶ್ರೀಮತಿ ಸೌಮ್ಯ ನಾಗರಾಜ್ ಬರೆದಿದ್ದಾರೆ .
ರಸ್ತೆ ತಪ್ಪಿ ಹೋಯಿತು!
ದಾರಿ ಯಾವುದೈಯ್ಯಾ ನೆಂಟರ ಮನೆಗೆ ಎಂದು ಯಾರನ್ನಾದರೂ ಕೇಳೋಣವೆಂದರೆ , ಅ ಮಳೆಯ ಕತ್ತಲಲ್ಲಿ ಯಾರೂ ಇರಲಿಲ್ಲ . ಆಗ ಮೊಬೈಲ್ ಫೋನ್ ಇರಲಿಲ್ಲ ಎಂದು ಮೊದಲೇ ತಿಳಿಸಿದ್ದೇನೆ ! ಒಂದು ಅರ್ಧಗಂಟೆಯ ನಂತರ ಬೀದಿ ದೀಪ ಬಂತು . ನಂತರ ನೆಂಟರ ಮನೆ ತಲುಪಿದೆವು .
ಅದೇ ಕಾರಿನ ಇನ್ನೊಂದು ಘಟನೆ
ಒಮ್ಮೆ ನಾವು ನಮ್ಮ ಮನೆಯಿಂದ ಇಸ್ಕಾನ್ಗೆ ಅಂದರೆ ಸುಮಾರು ಐದಾರು ಕಿಲೋಮೀಟರ್ ಅಲ್ಲಿಗೆ ಹೋಗೋಣವೆಂದು ಅದರಲ್ಲಿ ದೊಡ್ಡವರು ಆರು ಏಳು ಮಂದಿ ಮತ್ತು ಹುಡುಗರು 3-4 ಮಂದಿ ಕುಳಿತ ಕುಳಿತೆವು ನಮ್ಮ ತಂದೆಯವರು ಕಾರು ಓಡಿಸುತ್ತಿದ್ದರು ಅಷ್ಟು ಜನರನ್ನು ಆ ಕಾರು ಎಳೆಯಲು ಕಷ್ಟಪಟ್ಟಿತು ಇಂಜಿನ್ ತುಂಬಾ ಹೀಟ್ ಆಗಿ ಮೂರು ಕಿಲೋಮೀಟರ್ ಹೋಗುವ ಅಷ್ಟೊತ್ತಿಗೆ ನಿದ್ದೆ ಹೋಯಿತು ಆಗ ನಾವು ಕೆಲವರು ಈ ಕಾರಿಗೆ ಎಷ್ಟು ತೊಂದರೆ ಕೊಡುವುದು ಬೇಡವೆಂದು ಯೋಚಿಸಿದೆವು ಹಾಗೂ ನಮಗೆ ಅಷ್ಟೊಂದು ಜನ ಅದರಲ್ಲಿ ಕುಳಿತುಕೊಳ್ಳುವುದು ತುಂಬಾ ಇಕ್ಕಟ್ಟಾಗಿತ್ತು ಆದ್ದರಿಂದ ಅಲ್ಲಿಂದ ಕೆಲವರು ಆಟೋ ಮಾಡಿಕೊಂಡು ಇಸ್ಕಾನ್ ತಲುಪಿದೆವು
ಇದು ಚಿಕ್ಕ ಉದಾಹರಣೆಯಾದರೂ ಅಷ್ಟೊಂದು ಜನರನ್ನು ಆ ಕಾಲದಲ್ಲಿ ಒಂದೇ ಕಾರಿನಲ್ಲಿ ಕೂಡಿಸಿಕೊಂಡು ಹೋಗುವುದು ಆಕಾಲಕ್ಕೆ ಸಾಮಾನ್ಯ.
ಈ ಕಾಲದಲ್ಲಿ ದೊಡ್ಡ ಕಾರಿನಲ್ಲಿ ಒಬ್ಬರೇ ಹೋಗುವುದು ಸಾಮಾನ್ಯವಾಗಿದೆ. ಎಂತ ವಿಪರ್ಯಾಸ !
ಒಟ್ಟಿನಲ್ಲಿ ಹೇಳುವುದಾದರೆ ಅಷ್ಟೆಲ್ಲ ತೊಂದರೆಗಳಿದ್ದಾಗಿಯೂ ಆ ಕಾರು ಓಡಿಸುವುದೇ ಒಂದು ಮಜವಾಗಿತ್ತು.
ಅದೇ ಕಾರಿನಲ್ಲಿನ ಅನುಭವವನ್ನು ನನ್ನ ತಂಗಿ ಶ್ರೀಮತಿ ಸೌಮ್ಯ ನಾಗರಾಜ್ ಅವರು ಬರೆದಿದ್ದಾರೆ
ನಾವು ಚಿಕ್ಕವರಾದಾಗ ನಮ್ಮ ತಂದೆಯವರ ಬಳಿ ಒಂದು ಸೆಕೆಂಡ್ ಹ್ಯಾಂಡ್ (ಎಷ್ಟನೇ ಹ್ಯಾಂಡೋ ಗೊತ್ತಿಲ್ಲ!) ಸ್ಟ್ಯಾಂಡರ್ಡ್ ಕಾರ್ ಇತ್ತು. ಯಾವಾಗ ಎಲ್ಲಿಗೆ ಹೋಗ್ಬೇಕಾದ್ರು ಅದರ ತುಂಬಾ ಜನ ತುಂಬಿಕೊಂಡೇ ಹೋಗ್ತಿದ್ವಿ. ಅದಕ್ಕೆ ಬೇಕಾದಷ್ಟು ತೊಂದರೆಗಳಿದ್ರೂ ಅದು ನಮ್ಮನ್ನ ಸುರಕ್ಷಿತವಾಗಿ ಕರ್ಕೊಂಡ್ ಹೋಗ್ತಿತ್ತು. ಎಷ್ಟೋ ಬಾರಿ ಪೆಟ್ರೋಲ್ ಖಾಲಿ ಆಗಿದ್ದು, ಕಿಟಕಿ ಗ್ಲಾಸ್ ಸ್ಟಕ್ ಆಗಿದ್ದು, ಬೆಟ್ಟ ಹತ್ತುವಾಗ ಒಂದು ಟೈಯರ್ ಬಿಚ್ಚಿಕೊಂಡು ಉರುಳಿ ಹೋಗಿದ್ದು, ಎಂಜಿನ್ ಕೆಟ್ಟು ಏನು ಮಾಡಿದ್ರೂ ಸ್ಟಾರ್ಟ್ ಆಗ್ದೆ ಕಾಡಿನ ಮಧ್ಯೆ ಕಗ್ಗತ್ಲಲ್ಲಿ ಎಲ್ರೂ ಇಳಿದು ರಿಪೇರಿ ಆಗೋತಂಕ ಒಬ್ರಿಗೊಬ್ರು ಕೈ ಹಿಡ್ಕೊಂಡು ನಿಂತಿದ್ದು, ಹೀಗೆ ಏನೇನೋ ಆಗ್ತಿತ್ತು.
ಅದ್ರಲ್ಲಿ ಒಂದು ಘಟನೆ ಎಂದ್ರೆ ಒಂದ್ ಸಲ ಕತ್ಲಲ್ಲಿ ಮಳೆ ಜೋರಾಗಿ ಬರ್ತಿದ್ದಾಗ ಕಾರಿನ ವೈಪರ್ ಕೆಟ್ಟು ರೋಡಲ್ಲಿ ಏನೂ ಕಾಣದೆ ಹೋಯಿತು. ಆವಾಗ ನಮ್ಮ ತಂದೆ ಒಂದೆರಡು ಮೂಟೆ ಹುರಿ ತೊಗೊಂಡು (ಅಂತದ್ದೆಲ್ಲ ವಸ್ತುಗಳು ಕೈಗೆ ಸಿಕ್ಕೋಹಾಗೆ ಇರ್ತಿದ್ವು) ಎರಡು ವೈಪರ್ಗೂ ಒಂದೊಂದು ಹುರಿ ಕಟ್ಟಿ ಎರಡೂ ಕಿಟಕಿಗಳಿಂದ ಒಳಕ್ಕೆ ಬಿಟ್ಟರು. ನಾನು ಮತ್ತು ನನ್ನ ಅಣ್ಣ ಗೋವಿಂದ ಇಬ್ಬರೂ ಒಂದೊಂದು ಕಿಟಕಿ ಹತ್ರ ಕುಳಿತು ಆ ಎರಡೂ ಹುರಿಗಳ ತುದಿ ಹಿಡಿದು ಒಂದು ಸಲ ಗೋವಿಂದ ಅವನ ಕಡೆ ಎಳ್ಕೊಂಡ್ರೆ ವೈಪರ್ಗಳು ಆಕಡೆ ಹೋಗ್ತಿದ್ವು. ನಂತರ ನನ್ನ ಕಡೆ ಎಳ್ಕೊಂಡ್ರೆ ವೈಪರ್ಗಳು ನನ್ನ ಕಡೆ ಬರ್ತಿದ್ವು. ಇಬ್ರೂ ಗಮನ ಇಟ್ಟು ಒಬ್ರಾದ ಮೇಲೆ ಒಬ್ರು ಎಳಿಬೇಕಾಗಿತ್ತು. ಇದು ನಮಗೆ ತುಂಬ ಮಜನೂ ಕೊಡ್ತು, ನಮ್ಮ ತಂದೆಯವರಿಗೆ ಗಾಜು ಒರೆಸುವ ಕೆಲ್ಸನೂ ಆಯ್ತು. ಮನೆಗೆ ಬಂದ ಮೇಲೆ ಅವುಗಳ ರಿಪೇರಿ ಮಾಡಿಸಿದ್ರು. ಆದ್ರೆ ಇವತ್ತಿಗೂ ಆ ಘಟನೆ ನೆನಪಾದ್ರೆ ತುಂಬಾ ನಗು ಬರುತ್ತೆ. ಮತ್ತೆ ಆಗಿನ ಕಾಲದ ಹಿರಿಯರಿಗಿದ್ದ ಸಮಯಕ್ಕೆ ತಕ್ಕ ಜಾಣ್ಮೆ ಹೆಮ್ಮೆ ಎನಿಸುತ್ತದೆ.

ಜೀವನದ ನೈಜ ಘಟನೆ
ಬರಹ : ಶ್ರೀ ಕೆ ವಿ ಜಯರಾಂ
ರಕ್ತ ಕ್ಯಾನ್ಸರ್ ವಿರುದ್ಧದ ಹೋರಾಟ
ಏಪ್ರಿಲ್ 1975 ರಲ್ಲಿ, ಮೂವತ್ತನೇ ವಯಸ್ಸಿನಲ್ಲಿ, ನಾನು ಕನಸಿನ ಆರಂಭದಂತೆ ಕಾಣುವ ಹಂತಕ್ಕೆ ಕಾಲಿಟ್ಟೆ.
ಗಲ್ಫ್ ತೈಲ ಸಂಪತ್ತಿನಿಂದ ಜಾಗೃತಗೊಳ್ಳುತ್ತಿದ್ದ ಸಮಯದಲ್ಲಿ ನಾನು ಕತಾರ್ನ ದೋಹಾದಲ್ಲಿ ಅರಬ್ ನಿರ್ಮಾಣ ಕಂಪನಿಯಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದೆ. ಭಾರತದ ಯುವ ಸಿವಿಲ್ ಎಂಜಿನಿಯರ್ಗೆ, ಅದು ಒಂದು ಸುವರ್ಣ ಅವಕಾಶವಾಗಿತ್ತು – ಉತ್ತಮ ಸಂಬಳ, ಕುಟುಂಬ ವಸತಿ ಮತ್ತು ಆರ್ಥಿಕ ಭದ್ರತೆ. ಮೊದಲ ಬಾರಿಗೆ, ನಾನು ಹಣವನ್ನು ಉಳಿಸಲು ಮತ್ತು ಬೆಂಗಳೂರಿನಲ್ಲಿ ನನ್ನ ಕುಟುಂಬವನ್ನು ಬೆಂಬಲಿಸಲು ಸಾಧ್ಯವಾಯಿತು.
ಆದರೆ ಆ ವರ್ಷ ನನ್ನ ದೊಡ್ಡ ಸಂತೋಷ ಆ ಕೆಲಸವಲ್ಲ.
ನನ್ನ ಪತ್ನಿ ಮಲ್ಲಿಕಾ ಏಪ್ರಿಲ್ 27, 1975 ರಂದು ನಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು – ಅವಳ ಸ್ವಂತ ಜನ್ಮದಿನ. ಅದು ಹೆಣ್ಣು ಮಗು.
ನಾನು ಯಾವಾಗಲೂ ಮೊದಲು ಹೆಣ್ಣು ಮಗುವಿಗೆ ಹಾರೈಸುತ್ತಿದ್ದೆ.
ನಾವು ಅವಳಿಗೆ ಭಾವನಾ ಎಂದು ಹೆಸರಿಟ್ಟೆವು.
