ಆಧ್ಯಾತ್ಮ ವಿಭಾಗ

ಮಂಕುತಿಮ್ಮನ ಕಗ್ಗ – ಭಾಗ -4
ಬರಹ :
ಡಾ || ನಾಗೇಶ್ . ಎಲ್ .
ಯಾತ್ರಿಕರು ನಾವೆಲ್ಲ, ದಿವ್ಯಕ್ಷೇತ್ರವೀ ಲೋಕ ।
ಸತ್ರದಲಿ ನೇಮದಿಂದಿರಲಿಕೆಡೆಯುಂಟು ।।
ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು -।
ಪತ್ಯದವ ಮೆಚ್ಚುವನು – ಮಂಕುತಿಮ್ಮ ।।
ನಾವೆಲ್ಲರೂ ಹೊರದೇಶಗಳು ಈ ದೇಶದವರಲ್ಲ ನಾವು ಯಾತ್ರಿಕರು ಮತ್ತೆ ಲೋಕದ ಯಾತ್ರೆ ಮಾಡಿಕೊಂಡು ಬರಲು ಭಗವಂತ ನಮ್ಮನ್ನು ಕಳಿಸಿದ್ದಾನೆ()ಆದ್ದರಿಂದಲೇ ದಾಸರು ಹೇಳಿದ್ದು:
ಅಲ್ಲಿರುವುದು ನಮ್ಮೆಲ್ಲರ ಮನೆ ಇಲ್ಲಿರುವುದು ಸುಮ್ಮನೆ .ಅಂದರೆ, ಯಾತ್ರೆಗೆ ಬಂದವರು ಹೇಗಿರಬೇಕು? ಯಾತ್ರಿಕರಾಗೇ ಇರಬೇಕು. ಭಗವಂತ ನಮಗೆ ವಹಿಸಿದ ಪಾತ್ರವೇ ಯಾತ್ರಿಕ .ಯಾತ್ರೆಗೆ ಹೋದವರು ಬೇರೆ ದೇಶದಲ್ಲಿ ಮನೆ ಮಠ ಕಟ್ಟುತ್ತಾರೆಯೇ?ಆಸ್ತಿ ಆಸ್ತಿ ಮಾಡುತ್ತಾರೆಯೇ? ಆಯಾತ್ರ ಸ್ಥಳದ ಮೇಲೆ ಆ ಜನರು ವ್ಯಾಮೋಹ ಬೆಳೆಸಿಕೊಳ್ಳುತ್ತಾರೆಯೇ?
ಆದರೆ ನಾವು ಯಾತ್ರಿಕರು ಎಂಬುದನ್ನು ಮರೆತು, ಇದು ತಾತ್ಕಾಲಿಕವಾಗಿ ನಮಗೆ ಒದಗಿಸಿ ಕೊಟ್ಟ ತಾಣ ಎಂಬುದನ್ನು ಮರೆತು, ಮೋಹಿತರಾಗಿ ಆಸ್ತಿಪಾಸ್ತಿಗಳನ್ನು ಹೆಸರು ಪತಾಕೆಗಳನ್ನು ಗಳಿಸಲು ಸದಾ ನಮ್ಮ ಜೀವನವನ್ನೇ ಸವೆಸಿ ಬಿಡುತ್ತೇವೆ . ಎಷ್ಟು ಮತ್ತಿಬ್ರಮಣೆ ಗೊಂಡಿರುತ್ತೇವೆ ಎಂದರೆ , ಏನನ್ನೆಲ್ಲ ಹೋಗುವಾಗ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲವೋ ,ಅವುಗಳನ್ನೆಲ್ಲ ಗಳಿಸಲು ಜೀವನವನ್ನೇ ಮುಡುಪಾಗಿರುತ್ತೇವೆ. ಈ ತಾಣ ತೊರೆದು ಹೊರಡುವ ಗಳಿಗೆ ಬಂದಾಗ ನೆನಪಾಗುತ್ತದೆ, ಏನನ್ನು ಹೊತ್ತುಕೊಂಡು ಹೋಗಲು ಸಾಧ್ಯವೋ ಅದನ್ನು ಗಳಿಸಲು ನಾನು ಪ್ರಯತ್ನವೇ ಮಾಡಲಿಲ್ಲವಲ್ಲ ಎಂದು. ಆಗ ಪಶ್ಚಾತಾಪ ಪಟ್ಟು ಪ್ರಯೋಜನವಿಲ್ಲ.
ಈ ಮರ್ತ್ಯ ಲೋಕಕ್ಕೆ ಪ್ರಾಮಾಣಿಕವಾಗಿ ಬಂದ ನಮಗೆ ಭಗವಂತನ ಈ ಚಿತ್ರದಲ್ಲಿರಲು ಒಂದು ಅವಕಾಶ ಸಿಕ್ಕಿದೆ.ಆದರೆ ನಾವು ನಿಯಮ ಬದ್ಧರಾಗಿರಬೇಕು. ರಾತ್ರಿ 3 ಆಯ್ತು ಅಂದರೆ ಹೊರಡು ಎಂದರ್ಥ. ಆಯುಷ್ಯ ಮುಗಿಯಿತು ಅಂದರೆ ನಿರ್ಗಮಿಸಬೇಕು. ಆಗ ಭಗವಂತ ಮೆಚ್ಚಿಕೊಳ್ಳುತ್ತಾನೆ.