
ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು ।
ಭೂವಿಷಯದಿಂದ ರಸ ಮಾರ್ಪಡುವುದುಂಟು ।।
ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ ।
ಸೇವಕನು ನೀನಲ್ತೆ ? ಮಂಕುತಿಮ್ಮ ।।
ಭಗವದ್ಗೀತೆ ಎರಡನೇ ಅಧ್ಯಾಯ ಸಂಖ್ಯೆ ಯೋಗದ 47ನೇ ಶ್ಲೋಕ
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಘೋದ್ಯಸ್ತ್ವಕರ್ಮಣಿ॥
ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಕರ್ಮ ಯೋಗದ ಮುಖ್ಯ ಸೂತ್ರವನ್ನು ವಿವರಿಸಿ ಹೇಳುತ್ತಾನೆ
ಅರ್ಜುನ, ನಿನಗೆ ಕರ್ಮ ಮಾಡಲು ಮಾತ್ರ ಹಕ್ಕಿದೆ .ಆದರೆ ಕರ್ಮಫಲದ ಮೇಲೆ ಯಾವ ಹಕ್ಕು ಇಲ್ಲ. ಅದನ್ನು ನಿರ್ದೇಶಿಸುವ ಶಕ್ತಿ ಮತ್ತೊಂದಿದೆ . ಕರ್ಮಫಲ ತ್ಯಾಗವೇ ಮುಕ್ತನ ಲಕ್ಷಣ .ಕರ್ಮವನ್ನು ತ್ಯಾಗ ಮಾಡುವುದಲ್ಲ .ಕರ್ಮಫಲವನ್ನು ತ್ಯಾಗ ಮಾಡುವುದು ಬಹು ಮುಖ್ಯ .ಇದೇ ಜೀವನದ ಮುಖ್ಯ ಸೂತ್ರವಾಗಬೇಕು.
ಇದೇ ಅರ್ಥವನ್ನು ಕೊಡುವ ಒಂದು ಕಗ್ಗವನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡುತ್ತಿದ್ದೇನೆ. ಈ ಕಗ್ಗದಲ್ಲಿ ಡಿವಿಜಿಯವರು ಹೇಳುತ್ತಾರೆ “ಮಾವಿನ ಸಸಿ ತಂದು ನೀವು ಭೂಮಿಯಲ್ಲಿ ನೆಟ್ಟರೂ ಕೆಲವು ಬಾರಿ ಅದು ಬೇವನ್ನು ನೀಡುವ ಸಾಧ್ಯತೆ ಇದೆ. ಆತಂಕ ಪದುವುದು ಬೇಡ. ಕಾರಣವೇನೆಂದರೆ ಈ ಮರ್ತ್ಯ ಲೋಕವೇ ಹಾಗೆ. ಭೂಮಿ ವಿಷಯಗಳು (ಆಶೆಗಳು ) ಸ್ಪರ್ಶ ಮಾತ್ರದಿಂದ ಸಿಹಿರಸವನ್ನು ಕಹಿಯಾಗಿಸುತ್ತದೆ. ಫಲಿತಾಂಶದ ಬಗ್ಗೆ ನೀನು ಚಿಂತಿಸಬೇಡ. ಅದು ಈ ತೋಟದೊಡೆಯ, ಅಂದರೆ ಪರಮಾತ್ಮನಿಗೆ ಸಂಬಂಧಿಸಿದ್ದು .ಆತ ಅದನ್ನು ತೀರ್ಮಾನಿಸುತ್ತಾನೆ. ನೀನು ಏನಿದ್ದರೂ ತೋಟದಲ್ಲಿನ ಸೇವಕ ಮಾತ್ರ.”
ಹಾಗೆಂದ ಮಾತ್ರಕ್ಕೆ “ಎಲ್ಲವನ್ನು ದೇವರೇ ತೀರ್ಮಾನ ಮಾಡುವಹಾಗಿದ್ದರೆ ನಾವೇನು ಮಾಡಬೇಕು ?”ಎಂಬ ಅನುಮಾನ ಬರುವುದರಿಂದ ಇನ್ನೊಂದು ಶ್ಲೋಕವನ್ನು ಹಾಕಿದ್ದೇನೆ.
ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ ।
ಸನ್ನಾಹ ಸಾಗೀತೆ? ದೈವವೊಪ್ಪೀತೆ ।।
ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ ।
ನಿನ್ನ ಬಲವನ್ನು ಮೆರೆಸೋ – ಮಂಕುತಿಮ್ಮ ।।
ನನ್ನಿಂದ ಏನೂ ಸಾಧ್ಯವಿಲ್ಲ .ಕಾರಣ, ಫಲಿತಾಂಶ ನನ್ನ ಕೈಯಲ್ಲಿ ಇಲ್ಲ ಎಂದು ನಾವು ಕೈಕಟ್ಟಿ ಕುಳಿತುಕೊಳ್ಳಬಾರದು. ಭಗವಂತ ನಮಗೆ ದೇಹ ಶಕ್ತಿಯನ್ನು ,ಬುದ್ಧಿಶಕ್ತಿಯನ್ನು ಕೊಟ್ಟು ಕಳಿಸಿದ್ದಾನೆ. ಆದ್ದರಿಂದ ನಾವು, ಸುಮ್ಮನೆ ಕೂಡುವುದು ತಪ್ಪಲ್ಲವೇ? ನಮ್ಮ ಮೇಲಿರುವ ಜವಾಬ್ದಾರಿಯನ್ನು ದೈವದ ಭುಜಕ್ಕೆ ಏರಿಸುವುದು ಸರಿಯಲ್ಲ .ಹಾಗೆ ಮಾಡುವುದಾದರೆ , ಪುರುಷ ಪ್ರಯತ್ನಕ್ಕೆ ಬೆಲೆ ಇಲ್ಲದಂತಾಗುತ್ತದೆ. ಅಂತಹ ನಮ್ಮ ಸಣ್ಣವನ್ನು ಅಥವಾ ಯೋಚನೆಯನ್ನು ದೈವ ಒಪ್ಪುವುದಿಲ್ಲ. ನಮಗೆ ಭಗವಂತ ಕೊಟ್ಟಿರುವ ಸಾಮರ್ಥ್ಯವನ್ನು ,ಶಕ್ತಿಯನ್ನು ಸೂಕ್ತವಾಗಿ ಬಳಸಿಕೊಂಡು, ಜೀವನದ ಎಲ್ಲಾ ಸಂದರ್ಭಗಳನ್ನು ಎದುರಿಸಿ ನಿಲ್ಲಬೇಕು .ನಮ್ಮ ಸಮಸ್ಯೆಗಳು ಅಥವಾ ಕಷ್ಟಗಳ ಪರಿಹಾರಕ್ಕಾಗಿ ಭಗವಂತನನ್ನು ಪ್ರಾರ್ಥಿಸುವುದು ತಪ್ಪಲ್ಲ. ಆದರೆ ನಮ್ಮ ಪ್ರಯತ್ನವನ್ನು ನಾವು ಮಾಡದೇ ಹೋದರೆ ಅದು ಮೂರ್ಖತನವಾದೀತು .ಭಗವಂತ ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಬಹುದು ಅಥವಾ ಒಪ್ಪಿಕೊಳ್ಳದೆ ಇರಬಹುದು .ಆದರೆ ನಮ್ಮ ಪುರುಷ ಪ್ರಯತ್ನವನ್ನು ಮೆರೆಸಿ ನಾವು ಸಂತೋಷವಾಗಿರಬೇಕು. ಸೋಮಾರಿತನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರವೃತ್ತಿ .ಜಡತ್ವ ನಮ್ಮ ಪ್ರಗತಿಯ ಪಥದಲ್ಲಿ ಸಾಧ್ಯವಿಲ್ಲ. ಮಾಡಬೇಕಾದದ್ದು ಏನೋ ಅದನ್ನು ಮಾಡಲೇಬೇಕು.
ಸಂಪಾದಕರ ಬರಹ ಪ್ರಿಯ ಓದುಗರೇ ,ಕಳೆದ ಸಂಚಿಕೆಯಲ್ಲಿ ಕೈಬರಹದ ಪ್ರಶ್ನೆ ಬಹಳ ಸುಲಭವಾಗಿತ್ತು. ಆದರೂ ಕೇವಲ ಒಬ್ಬರೇ ಒಬ್ಬರು ಬರೆದು ಕಳಿಸಿರುವುದು ಸ್ವಲ್ಪ ಬೇಸರ ತಂದಿದೆ. ಈ ಸಂಚಿಕೆಯಿಂದಲಾದರೂ. ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಯತ್ನಿಸಿ. ಡಾಕ್ಟರ್ ಚಂದ್ರಶೇಖರ್ ರಾವ್ ಅವರು ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೀವು ನಿಮ್ಮ ಅಭಿಪ್ರಾಯಗಳು ವಿಭಾಗದಲ್ಲಿ ನೋಡಬಹುದು. ಕಳೆದ ಸಂಚಿಕೆಯಲ್ಲಿ ಬಹಳ ಓದುಗರು ಡಾಕ್ಟರ್ ನಾಗೇಶ್ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಡಾಕ್ಟರ್ ನಾಗೇಶ್…
ಶ್ರೀ ಜಯರಾಂ ಕೆ ವಿ ಅವರು ರಚಿಸಿರುವ ಚಿತ್ರಗಳು ಮತ್ತು ಕಿರು ಲೇಖನಗಳು ಶತಾವಧಾನಿ ಗಣೇಶನ ಭಾವಚಿತ್ರ. ಅವರು UVCE ಯಿಂದ ಎಂಜಿನಿಯರಿಂಗ್ ಮತ್ತು IISc ಯಿಂದ ME ಪದವಿ ಪಡೆದರು. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಳಿಗಾಗಿ ಅವರು ಡಾಕ್ಟರೇಟ್ ಪಡೆದರು. 1962 ರಲ್ಲಿ ಕೋಲಾರದಲ್ಲಿ ಜನಿಸಿದ ಅವರು ಅವಧಾನಿಯಾಗಿದ್ದು, ನೂರಾರು ಜ್ಞಾನವುಳ್ಳ ಭಾಗವಹಿಸುವವರನ್ನು ಏಕಕಾಲದಲ್ಲಿ ನಿಭಾಯಿಸಬಲ್ಲರು, ಅವರು ಅವರ ಆಲೋಚನೆಗಳನ್ನು ತೊಂದರೆಗೊಳಿಸಬಹುದು, ಗೊಂದಲಗೊಳಿಸಬಹುದು ಇತ್ಯಾದಿ. ಆದರೆ ಅವರನ್ನು ಸೋಲಿಸಲು ಅಥವಾ ದಾರಿ…
ಮಹಿಳಾ ಸಬಲೀಕರಣ – AI ಮಾರ್ಗ ಲೇಖಕರು ಶ್ರೀ ಜಯರಾಂ ಕೆ ವಿ ಭಾರತದ ಸಂವಿಧಾನವು ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ. ದಶಕಗಳಲ್ಲಿ, ಮಹಿಳೆಯರು ರಾಜಕೀಯ, ಆಡಳಿತ, ವಿಜ್ಞಾನ ಮತ್ತು ವ್ಯವಹಾರದಲ್ಲಿ ನಾಯಕತ್ವದ ಪಾತ್ರಗಳಿಗೆ ಏರಿದ್ದಾರೆ. ಆದರೂ, ದೇಶಾದ್ಯಂತ ಲಕ್ಷಾಂತರ ಜನರಿಗೆ – ವಿಶೇಷವಾಗಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ – ಈ ಭರವಸೆ ಭಾಗಶಃ ಮಾತ್ರ ಈಡೇರಿದೆ. ಭಾರತೀಯ ಮಹಿಳೆಯರಲ್ಲಿ ಹೆಚ್ಚಿನ ಭಾಗವು ಕೃಷಿ, ನಿರ್ಮಾಣ, ಸಣ್ಣ-ಪ್ರಮಾಣದ ಕೈಗಾರಿಕೆಗಳು ಅಥವಾ…
4°C ರಹಸ್ಯ ಸಾಮಾನ್ಯವಾಗಿ ಯಾವುದೇ ವಸ್ತುವನ್ನು ತಂಪು ಮಾಡಿದಂತೆ ಅದು ಕುಗ್ಗುತ್ತದೆ. ಆದರೆ ನೀರು ಮಾತ್ರ 4°C ಹತ್ತಿರ ಒಂದು ವಿಚಿತ್ರ ವರ್ತನೆ ತೋರಿಸುತ್ತದೆ. 4°C ವರೆಗೆ ತಂಪಾಗುವಾಗ ನೀರು ಕುಗ್ಗುತ್ತದೆ. ಆದರೆ 4°C ಗಿಂತ ಕೆಳಗೆ ಹೋದಾಗ ಮತ್ತೆ ನಿಧಾನವಾಗಿ ಹಿಗ್ಗಲು ಪ್ರಾರಂಭಿಸುತ್ತದೆ. ಇದೇ ನೀರಿನ ಒಂದು ಅದ್ಭುತ ಗುಣ. ನೀರಿನ ಉಷ್ಣಾಂಶ 4°C ಇದ್ದಾಗ ಅದರ ಸಾಂದ್ರತೆ ಗರಿಷ್ಠವಾಗಿರುತ್ತದೆ. ಆದ್ದರಿಂದ 4°C ನೀರು ಇತರ ನೀರಿಗಿಂತ ಹೆಚ್ಚು ಭಾರವಾಗಿದ್ದು ಕೆಳಕ್ಕೆ ಹೋಗುತ್ತದೆ. ಚಳಿಗಾಲದಲ್ಲಿ ಕೆರೆಯ…
ಸಂಪಾದಕರ ಬರಹ ಪ್ರಿಯ ಓದುಗರೇ ಈ ಸಲದ ಸಂಚಿಕೆಯನ್ನು , ಒಂದೇ ಉದ್ದನೆಯ ಪುಟದಲ್ಲಿ ಮಾಡಲಾಗಿದೆ. “ಈ ಸಂಚಿಕೆಯಲ್ಲಿ” ಎಂಬ ವಿಭಾಗದಲ್ಲಿರುವ ಎಲ್ಲ ಹೆಡ್ಡಿಂಗ್ ಗಳನ್ನು ನೀವು ಒತ್ತಿ, ನೇರವಾಗಿ ಯಾವುದೇ ವಿಭಾಗಕ್ಕೆ ಹೋಗಬಹುದು ಮತ್ತು ಬಲಗಡೆ ಮೊಬೈಲ್ನ ಕೆಳಗಡೆ ಕಾಣುವ ಕೆಂಪುಬಣ್ಣದ ಆರೋ ಮಾರ್ಕ್ ಒತ್ತಿ ದರೆ ಮತ್ತೆ ಅದು ಮುಖಪುಟಕ್ಕೆ ಹೋಗುತ್ತದೆ . ಹೀಗೆ ಮಾಡದೆ ನೀವು ಸ್ಕ್ರಾಲ್ ಮಾಡುತ್ತಾ ಪೂರ್ತಿ ಸಂಚಿಕೆಯನ್ನು ಕೂಡ ಓದಬಹುದು. ಈ ಸಲದ ಕೈಬರಹದ ಸ್ಪರ್ಧೆ ಬಹಳ ಸುಲಭವಾಗಿದೆ…
ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ 10 ರಿಂದ 16 ವರ್ಷ ಒಳಗಿನ ಮಕ್ಕಳ ವಿಭಾಗ 10 ವರ್ಷದ ಒಳಗಿನ ಮಕ್ಕಳ ವಿಭಾಗ ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ – ಬರೆದು ಕಳಿಸಲು ಕೊನೆಯ ದಿನಾಂಕ 25/04/2026. – A4 ಹಾಳೆ ಯಲ್ಲಿ ಬರೆದು, ಫೋಟೋ ತೆಗೆದು ಕಳಿಸಿ . – ನೀವು ಬರೆದ ಚಿತ್ರದ ಮೇಲ್ಭಾಗದಲ್ಲಿ, ಹೆಸರು, ವಯಸ್ಸು ಹಾಗು ಸಂಕ್ಷಿಪ್ತ ವಿಳಾಸ ಬರೆದು ಕಳಿಸಿ ನನ್ನ ನೆಚ್ಚಿನ ವ್ಯಕ್ತಿ ಸ್ಪರ್ಧೆಯ ಉತ್ತರಗಳು ಶ್ರೀಮತಿ ಸುಮಾ ಆನಂದ್…
Website security powered by MilesWeb