


ಸಂಪಾದಕರ ಬರಹ
ಶ್ರೀ ಜಯರಾಂ ಎ ಎಸ್
ನಮ್ಮ ಮಾರ್ಚ್ ಸಂಚಿಕೆಯಲ್ಲಿ “ನನ್ನ ನೆಚ್ಚಿನ ವ್ಯಕ್ತಿ” ಎಂಬ ವಿಷಯಕ್ಕೆ ಸ್ಪರ್ಧೆಯನ್ನು ಘೋಷಿಸಿದ್ದೆ. ಆದರೆ, ಈ ಬಾರಿ ಓದುಗರ ಸಂಖ್ಯೆ ಕಡಿಮೆಯಾಗಿರುವುದರಿಂದಲೂ, ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಭಾಗವಹಿಸಿರುವುದು ಗಮನಾರ್ಹ. ಇದು ಸ್ವಲ್ಪ ನಿರಾಶೆ ತಂದರೂ, ಅವರು ಬರೆದಿರುವ ಬರಹಗಳಲ್ಲಿ ಮತ್ತು “ನಿಮ್ಮ ಅಭಿಪ್ರಾಯ” ದಲ್ಲಿ ಕಾಣಿಸಿದ ಅಭಿಮಾನ, ಆದರ್ಶಗಳ ಮೇಲಿನ ಗೌರವ ಮತ್ತು ವ್ಯಕ್ತಿತ್ವದ ಮೆಚ್ಚುಗೆ ನಮಗೆ ಸಂತೋಷವನ್ನುಂಟು ಮಾಡಿದೆ.
ಸ್ಪರ್ಧೆಯ ಉದ್ದೇಶ ಬಹುಮಾನವಷ್ಟೇ ಅಲ್ಲ; ನಮ್ಮ ಜೀವನದಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳನ್ನು ನೆನಪಿಸಿಕೊಂಡು, ಅವರಿಂದ ಪ್ರೇರಣೆ ಪಡೆಯುವುದು ಮುಖ್ಯ. ಓದುಗರ ಸಂಖ್ಯೆ ಹೆಚ್ಚಾದಂತೆ, ಇಂತಹ ಸ್ಪರ್ಧೆಗಳ ಉತ್ಸಾಹವೂ ಹೆಚ್ಚುತ್ತದೆ ಎಂಬುದು ನಮ್ಮ ನಂಬಿಕೆ.
ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಓದುಗರು ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡುತ್ತೇವೆ. ಈ ಬಾರಿ ಭಾಗವಹಿಸಿದ ಇಬ್ಬರು ಸ್ಪರ್ಧಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಬಹುಮಾನವನ್ನು ಅವರಲ್ಲಿ ಒಬ್ಬರಿಗೆ ನೀಡಲಾಗುತ್ತದೆ.
ಹೊಸ ವಿನ್ಯಾಸ ಹಾಗೂ ಹೊಸ ವೆಬ್ಸೈಟ್ ಗೆ ನಾನು ಬಂದಿರುವುದರಿಂದ, 2025ರ ಏಪ್ರಿಲ್ ಸಂಚಿಕೆಯಿಂದ, 2026 ಫೆಬ್ರವರಿ ವರೆಗಿನ ಎಲ್ಲಾ ಹಳೆಯ ಸಂಚಿಕೆಗಳ ಲಿಂಕುಗಳು ಈಗ ಲಭ್ಯವಿರುವುದಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಮಾರ್ಚ್ 2026 ಲಿಂಕ್ ಸರಿಯಾಗಿದೆ.
ಹಿಂದಿನ ಸಂಚಿಕೆಯಂತೆ, ಈ ಕೆಳಗಿನ ಲಿಂಕ್ ಗಳನ್ನು ಒತ್ತಿ, ಯಾವ ವಿಭಾಗಕ್ಕೆ ಬೇಕಾದರೂ ಹೋಗಬಹುದು. ಆದರೆ, ಮೊದಲಿನ ಲಿಂಕ್ ಒತ್ತಿ , ಸ್ಪರ್ಧಾ ವಿಭಾಗಕ್ಕೆ ಹೋಗಿ , ಅಲ್ಲಿಂದ ” ಮುಂದಿನ ವಿಭಾಗಕ್ಕೆ ” ಎಂದು ಒತ್ತಿ , ಇತರ ವಿಭಾಗಗಳಿಗೆ ಹೋಗುವುದು ಸುಲಭ.