ರಾಮು ಮಾಸ್ತರ ಪ್ರಶ್ನೆಗಳು – ನವೆಂಬರ್ 2026

ಕಳೆದ ಸಂಚಿಕೆಯ ಪ್ರಶ್ನೆಗಳಿಗೆ ಓದುಗರ ಉತ್ತರಗಳು :

ಜೂಸ್ ಹಂಚುವ ಪ್ರಶ್ನೆ ಎಲ್ಲರ ಗಮನ ಸೆಳದಿದೆ .

ಅದಕ್ಕೆ ಶ್ರೀಮತಿ ಸುಮಾ ಆನಂದ್ ಅವರು ಈ ಕೆಳಗಿನ ವಿಡಿಯೋ ಮಾಡಿ ಹಾಕಿದ್ದಾರೆ !

ಅದ್ಭುತ

ಅವರು ಬರೆದ ಉತ್ತರಗಳು

ಶ್ರೀಮತಿ ಸುಮಾ ಆನಂದ್ ಅವರು ಬರೆದ ಉತ್ತರಗಳಲ್ಲಿ 2 ನೇ ಉತ್ತರ ಬಿಟ್ಟು , ಎಲ್ಲವೂ ಸರಿಯಾಗಿದೆ . ಜೂಸ್ ವಿಡಿಯೋ ಚೆನ್ನಾಗಿದೆ .

ಶ್ರೀ ಎಸ್ ವಿಠ್ಠಲ ರಾವ್ ಅವರು ಬರೆದ ಉತ್ತರಗಳು :

ಈ ಮೇಲಿನ ಚಿತ್ರಗಳ ಮೂಲಕ ಜೂಸ್ ಲೆಕ್ಕದ ಉತ್ತರ ಬರೆದಿರುವುದು ತುಂಬಾ ಚೆನ್ನಾಗಿದೆ . ಉತ್ತರ 3 ಬಿಟ್ಟು ಎಲ್ಲಾ ಸರಿಯಿದೆ. ಮಂಜುಗಡ್ಡೆ ಸರಿ ಉತ್ತರ

ಶ್ರೀಮತಿ ಸುಬ್ಬಲಕ್ಷ್ಮಿ ಎಸ್ ರಾವ್ ಅವರು ಜೂಸ್ ಪ್ರಶ್ನೆಗೆ ಉತ್ತರ ವಿವರಿಸಿ ಬರೆದಿದ್ದಾರೆ.

2 ನೇ ಪ್ರಶ್ನೆಗೆ ಕೆಮಿಸ್ಟ್ರಿ ಅವರನ್ನು ಕೇಳಿದರೆ ಅನೇಕ ಉತ್ತರ ಹೇಳುವರು. ಎಲ್ಲರಿಗೂ ತಿಳಿದಿರುವ ಇನ್ನೊಂದು ಉತ್ತರ – ಪಚ್ಚಕರ್ಪೂರ – ತೇಲುತ್ತೆ – ಜಾಸ್ತಿ ನೀರಿನಲ್ಲಿ ನಿಧಾನವಾಗಿ ಕರಗುತ್ತೆ

ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು .

ಈ ಸಂಚಿಕೆಯ ಪ್ರಶ್ನೆಗಳು

1. ಕನ್ನಡಕ ,ಬೀಗದ ಕೈ ಮುಂತಾದ ವಸ್ತುಗಳನ್ನು ಮನೆಯಲ್ಲಿ ಎಲ್ಲೋ ಇಟ್ಟು ಮರೆತಾಗ ಸುಲಭವಾಗಿ ಅದನ್ನು ಹುಡುಕುವ ಉಪಾಯಗಳೇನು?

2. ರಾತ್ರಿ ಮೋಡ ಕವಿದಿದ್ದಾಗ ಬೇಸಿಗೆ ಕಾಲದಲ್ಲಿ ಇನ್ನೂ ಹೆಚ್ಚು ಸೆಕೆಯಾಗುತ್ತದೆ ಇದು ಏಕೆ?

3. ನಿಮ್ಮ ಹತ್ತಿರ 10 ಮಿಲಿ ಗ್ರಾಂ ಅಷ್ಟು ಕಡಿಮೆ ತೂಕವನ್ನು ಅಳೆಯುವ ಸಾಧನವಿದೆ. ನಮಗೆ 5 ಮಿಲಿ ಗ್ರಾಂ ನ ತೂಕ ಬೇಕೆಂದರೆ ಸುಲಭವಾಗಿ ಹೇಗೆ ಮಾಡಬಹುದು?

4. ಭೂಕಂಪವಾಗಲು ಮುಖ್ಯ ಕಾರಣಗಳೇನು?

5. ಒಬ್ಬನ ತರಕಾರಿ ಅಂಗಡಿಯವನ ಹತ್ತಿರ ಈ ರೀತಿಯ ತಕ್ಕಡಿ ಇದೆ.

1 ಕೆಜಿ ಇಂದ 50 ಕೆಜಿ ವರೆಗೂ ಎಲ್ಲಾ ಅಳತೆ, ಅಂದರೆ 1,2,3,4,…..50 ಕೆಜಿ ತೂಕ ಮಾಡಲು ಕಡಿಮೆ ಎಂದರೆ ಎಷ್ಟು ಬೊಟ್ಟು ಹಾಗೂ ಯಾವ ಯಾವ ಕೆಜಿ ಇರುವುವು ಬೇಕು ?

– ಒಬ್ಬರಿಗೆ ಒಟ್ಟು ತರಕಾರಿ ಒಮ್ಮೆಯೇ ತೂಕ ಹಾಕಬೇಕು . ಅಂದರೆ, 10 ಕೆಜಿಗೆ, 5ಕೆಜಿ ಒಮ್ಮೆ ಮತ್ತೆ 5ಕೆಜಿ ಇನ್ನೊಮ್ಮೆ ಹಾಕುವಂತಿಲ್ಲ .

– ಅಕ್ಕಿಯನ್ನು ಒಂದೇ ಪ್ಯಾನ್ ನಲ್ಲಿ ಹಾಕಬೇಕು, ಆದರೆ ತೂಕದ ಬೊಟ್ಟನ್ನು ಎರಡೂ ಪ್ಯಾನ್ ಗಳಲ್ಲಿ ಹಾಕಬಹುದು .

Similar Posts

  • test post

    Jayaram AS is a retired associate professor with 33 years of teaching experience. He has the passion for a diverse array of interests that have defined his rich and fulfilling life. With a deep-rooted love for academia, Jayaram has left an indelible mark through his prolific career in teaching and research.

  • ಸ್ಪರ್ಧೆ- ನವೆಂಬರ್ 2026 :

    ಈ ಸಂಚಿಕೆ ಸ್ಪರ್ಧೆ: ನಿಮ್ಮ ಪ್ರವಾಸದಲ್ಲಿ ನಡೆದ ಅವಿಸ್ಮರಣೀಯವಾದ ಘಟನೆಯನ್ನು 20 ಸಾಲುಗಳಲ್ಲಿ ಬರೆದು ಕಳಿಸಬೇಕು. ಆ ಘಟನೆಯು, ಕುತೂಹಲ ಮೂಡಿಸುವಂತಿರಬಹುದು ಅಥವಾ ಹಾಸ್ಯಮಯವಾಗಿ ಇರಬಹುದು ಅಥವಾ ನಿಮಗೆ ತೊಂದರೆಯಾಗಿ ಅದನ್ನು ಸರಿಪಡಿಸಿಕೊಂಡಿದ್ದು ಇರಬಹುದು. ಹೀಗೆ ಏನೇ ಆಗಲಿ, ನಿಮ್ಮ ಪ್ರವಾಸಕ್ಕೆ ಸಂಭಂಧಪಟ್ಟ ಘಟನೆ ಆಗಿರಬೇಕು. ಬರೆದು ಕಳಿಸಲು ಕೊನೆಯ ದಿನಾಂಕ ನವೆಂಬರ್ 25, 2026 ಕಳೆದ ಸಂಚಿಕೆಯ ಸ್ಪರ್ಧೆಯ ಉತ್ತರಗಳು ಕಳೆದ ಸಂಚಿಕೆ ಸ್ಪರ್ಧೆಯಲ್ಲಿ ಕನ್ನಡದ ಅನೇಕ ವಿಷಯಗಳಿಗೆ ಲೇಖನಗಳನ್ನು ಬರೆಯಬೇಕಾಗಿತ್ತು. ಅದರಲ್ಲಿ ಮೂರು ಜನರು…

  • ಸುದ್ದಿಗಳು -ನವೆಂಬರ್ 2026 :

    ಮುಖ್ಯವಾಗಿ ನವರಾತ್ರಿ ಸಂದರ್ಭದಲ್ಲಿ ಅನೇಕರ ಮನೆಯಲ್ಲಿ ಬೊಂಬೆಗಳನ್ನು ಕೂಡಿಸಿದ್ದರು. ಹೀಗೆಯೇ ನಮ್ಮ ನೆಂಟರ ಮನೆಯಲ್ಲಿ ಬೊಂಬೆ ಕೂಡಿಸಿದ ಎರಡು ವಿಡಿಯೋಗಳನ್ನು ಈಗ ನೋಡೋಣ. 1. ಹೆಸರು: ಶ್ರೀಮತಿ ಸ್ವರ್ಣ ಸುಧೀರ್. 2. ಹೆಸರು: ಶ್ರೀ ಶ್ರೀಕಾಂತ . ಇದರಲ್ಲಿ ಮಾತನಾಡಿರುವವರು : ಕುಮಾರಿ ಅನಘ ಹಾಗೂ ಕುಮಾರ ಆದಿತ್ಯ . ಇಲ್ಲಿ ಕಾಣುವ ಮಹಾಕಾಲನನ್ನು ಆದಿತ್ಯನೇ ಮಾಡಿರುವುದು ! ಬಂಡೆ ಮಹಾ ಕಾಳಿ ದೇವಸ್ಥಾನ ಚಿತ್ರಗಳು : ಶ್ರೀ ಜಯರಾಂ ಎ ಎಸ್ ಅನೇಕ ದೇವಸ್ಥಾನಗಳಲ್ಲಿ ವಿಜೃಂಭಣೆಯಿಂದ…

  • ಆಧ್ಯಾತ್ಮ ವಿಭಾಗ -ನವೆಂಬರ್ 2026 :

    ಶೀರ್ಷಿಕೆ : ಬದುಕಿನಲ್ಲೊಂದು ಮರೆಯಲಾಗದ ದಂಪತಿ ಲೇಖಕರು : ಶ್ರೀ ರಾಮ್ ಪ್ರಸಾದ್ ನಾವು ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದ ಕಾಲ. ಆಗ ನಮ್ಮ ಮಕ್ಕಳಿನ್ನೂ ಚಿಕ್ಕವರು. ಭಾರತವನ್ನು ಬಿಟ್ಟು ವಿದೇಶಗಳಿಗೆ ಹೋಗಿ ನೆಲೆಸಿದವರಿಗೆ, ಭಾರತದಲ್ಲಿದ್ದಾಗಿಗಿಂತಲೂ ನಮ್ಮ ಭಾಷೆ, ಸಂಸ್ಕೃತಿ, ಧರ್ಮ, ಹಬ್ಬ ಹರಿದಿನಗಳ ಬಗ್ಗೆ ಪ್ರೀತಿ, ಅಭಿಮಾನ ಮತ್ತು ಕಾಳಜಿ ಇನ್ನಷ್ಟು ಹೆಚ್ಚಾಗುವುದು ಸಾಮಾನ್ಯ. ಅದಕ್ಕೆ ನಾವೂ ಹೊರತಾಗಿರಲಿಲ್ಲ. ಹೀಗಾಗಿ ನಾನು ಅಲ್ಲಿನ ಕನ್ನಡ ಕೂಟದ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಲು ಪ್ರಾರಂಭಿಸಿದ್ದೆ. ಅದಕ್ಕೆ ಎರಡು ಮುಖ್ಯ ಕಾರಣಗಳಿದ್ದವು….

Leave a Reply

Your email address will not be published. Required fields are marked *