ಪ್ರತಿಭಾ ಪತ್ರಿಕೆ – ಏಪ್ರಿಲ್ 2026

ಸಂಪಾದಕರ ಬರಹ

ಶ್ರೀ ಜಯರಾಂ ಎ ಎಸ್

ನಮ್ಮ ಮಾರ್ಚ್ ಸಂಚಿಕೆಯಲ್ಲಿ “ನನ್ನ ನೆಚ್ಚಿನ ವ್ಯಕ್ತಿ” ಎಂಬ ವಿಷಯಕ್ಕೆ ಸ್ಪರ್ಧೆಯನ್ನು ಘೋಷಿಸಿದ್ದೆ. ಆದರೆ, ಈ ಬಾರಿ ಓದುಗರ ಸಂಖ್ಯೆ ಕಡಿಮೆಯಾಗಿರುವುದರಿಂದಲೂ, ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಭಾಗವಹಿಸಿರುವುದು ಗಮನಾರ್ಹ. ಇದು ಸ್ವಲ್ಪ ನಿರಾಶೆ ತಂದರೂ, ಅವರು ಬರೆದಿರುವ ಬರಹಗಳಲ್ಲಿ ಮತ್ತು “ನಿಮ್ಮ ಅಭಿಪ್ರಾಯ” ದಲ್ಲಿ ಕಾಣಿಸಿದ ಅಭಿಮಾನ, ಆದರ್ಶಗಳ ಮೇಲಿನ ಗೌರವ ಮತ್ತು ವ್ಯಕ್ತಿತ್ವದ ಮೆಚ್ಚುಗೆ ನಮಗೆ ಸಂತೋಷವನ್ನುಂಟು ಮಾಡಿದೆ.

ಸ್ಪರ್ಧೆಯ ಉದ್ದೇಶ ಬಹುಮಾನವಷ್ಟೇ ಅಲ್ಲ; ನಮ್ಮ ಜೀವನದಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳನ್ನು ನೆನಪಿಸಿಕೊಂಡು, ಅವರಿಂದ ಪ್ರೇರಣೆ ಪಡೆಯುವುದು ಮುಖ್ಯ. ಓದುಗರ ಸಂಖ್ಯೆ ಹೆಚ್ಚಾದಂತೆ, ಇಂತಹ ಸ್ಪರ್ಧೆಗಳ ಉತ್ಸಾಹವೂ ಹೆಚ್ಚುತ್ತದೆ ಎಂಬುದು ನಮ್ಮ ನಂಬಿಕೆ.

ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಓದುಗರು ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡುತ್ತೇವೆ. ಈ ಬಾರಿ ಭಾಗವಹಿಸಿದ ಇಬ್ಬರು ಸ್ಪರ್ಧಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಬಹುಮಾನವನ್ನು ಅವರಲ್ಲಿ ಒಬ್ಬರಿಗೆ ನೀಡಲಾಗುತ್ತದೆ.

ಹೊಸ ವಿನ್ಯಾಸ ಹಾಗೂ ಹೊಸ ವೆಬ್ಸೈಟ್ ಗೆ ನಾನು ಬಂದಿರುವುದರಿಂದ, 2025ರ ಏಪ್ರಿಲ್ ಸಂಚಿಕೆಯಿಂದ, 2026 ಫೆಬ್ರವರಿ ವರೆಗಿನ ಎಲ್ಲಾ ಹಳೆಯ ಸಂಚಿಕೆಗಳ  ಲಿಂಕುಗಳು ಈಗ ಲಭ್ಯವಿರುವುದಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಮಾರ್ಚ್ 2026 ಲಿಂಕ್ ಸರಿಯಾಗಿದೆ.

ಹಿಂದಿನ ಸಂಚಿಕೆಯಂತೆ, ಈ ಕೆಳಗಿನ ಲಿಂಕ್ ಗಳನ್ನು ಒತ್ತಿ, ಯಾವ ವಿಭಾಗಕ್ಕೆ ಬೇಕಾದರೂ ಹೋಗಬಹುದು. ಆದರೆ, ಮೊದಲಿನ ಲಿಂಕ್ ಒತ್ತಿ , ಸ್ಪರ್ಧಾ ವಿಭಾಗಕ್ಕೆ ಹೋಗಿ , ಅಲ್ಲಿಂದ ” ಮುಂದಿನ ವಿಭಾಗಕ್ಕೆ ” ಎಂದು ಒತ್ತಿ , ಇತರ ವಿಭಾಗಗಳಿಗೆ ಹೋಗುವುದು ಸುಲಭ.

Similar Posts

  • ಸುದ್ದಿ ವಿಭಾಗ

    ಅತ್ತಿಗುಪ್ಪೆ ಶ್ರೀ ನರಸಿಂಹ ಸ್ವಾಮಿ ರಥೋತ್ಸವ ಎಂದಿನಂತೆ ಈವರ್ಷವೂ ಅತ್ತಿಗುಪ್ಪೆಯ ಶ್ರೀ ನರಸಿಂಹ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು . ದೇವಸ್ಥಾನದ ಒಳಗಿನ ವಿಗ್ರಹಗಳು ಮತ್ತು ಅಲಂಕಾರದ ಚಿತ್ರಗಳು ================= ರಥೋತ್ಸವ     ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಚಂದ್ರಾ ಬಡಾವಣೆಯ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ನಡೆಯಿತು . ಅದರ ಪ್ರಯುಕ್ತ, ಮಾರ್ಚ್ 7 ರಂದು ಸಂಜೆ, ಶ್ರೀ ಪುತ್ತೂರು ನಾರಸಿಂಹನಾಯಕ್ ಅವರ ಹಾಡುಗಾರಿಕೆ ಏರ್ಪಡಿಸಲಾಗಿತ್ತು . ಮಲ್ಲಿಗೆರಯ ಶ್ರೀ ಕರಿಯಮ್ಮ…

  • test 2

    ಸಂಪಾದಕರ ಬರಹ ಪ್ರಿಯ ಓದುಗರೇ, ನಮ್ಮ ಮಾಸಪತ್ರಿಕೆಯ ನೂತನ ಶೈಲಿಯ ಈ ತಿಂಗಳ ಸಂಚಿಕೆಯನ್ನು ನಿಮ್ಮ ಕೈಗೆ ನೀಡುತ್ತಿರುವುದು ನನಗೆ ಅತ್ಯಂತ ಸಂತೋಷಕರ ಸಂಗತಿ. ನಮ್ಮ ಪ್ರಯತ್ನ ಸದಾ ಉತ್ತಮ ವಿಷಯಗಳನ್ನು ನಿಮ್ಮ ಮುಂದೆ ಇಡುವುದೇ ಆಗಿದೆ. “ಬರಹಗಳು ಮನಸ್ಸಿಗೆ ಬೆಳಕು ನೀಡುತ್ತದೆ.” ಬದಲಾಗುತ್ತಿರುವ ಈ ಪ್ರಪಂಚಕ್ಕೆ ಈ ಸಲದ ಪತ್ರಿಕೆಯು ಹೊಸ ವಿನ್ಯಾಸದೊಂದಿಗೆ ಬರುತ್ತಿದೆ. ಮೊದಲನೇ ಪುಟದ ಕೊನೆಯಲ್ಲಿ, ಎಲ್ಲ ವಿಭಾಗಗಳ ಲಿಂಕುಗಳು ಇವೆ . ಅವುಗಳನ್ನು ಒತ್ತಿ ನೇರವಾಗಿ ನೀವು ಆ ವಿಭಾಗಗಳಿಗೆ ಹೋಗಬಹುದು….

  • test post

    Jayaram AS is a retired associate professor with 33 years of teaching experience. He has the passion for a diverse array of interests that have defined his rich and fulfilling life. With a deep-rooted love for academia, Jayaram has left an indelible mark through his prolific career in teaching and research.

  • test

    ಸಂಪಾದಕೀಯ ಸಂಪಾದಕೀಯ ಇಲ್ಲಿ ನಿಮ್ಮ ಸಂಪಾದಕೀಯ ಲೇಖನ ಆರಂಭವಾಗುತ್ತದೆ… ಈ ಪಠ್ಯವನ್ನು ಪ್ರತಿ ತಿಂಗಳು ಬದಲಾಯಿಸಿದರೆ ಸಾಕು. ವಿನ್ಯಾಸವನ್ನು ಮತ್ತೆ ಬದಲಾಯಿಸುವ ಅಗತ್ಯವಿಲ್ಲ. ಪ್ರತಿಭಾ ಪತ್ರಿಕೆ

Leave a Reply

Your email address will not be published. Required fields are marked *