ಈ ವಿಭಾಗದಲ್ಲಿ ಬರೇ ಚಿತ್ರಕಲೆಗಳ ಬದಲು, ಅನೇಕ ರೀತಿಯ ಕಲೆಗಳು ಎಂದರೆ ಮುಖ್ಯವಾಗಿ ಹವ್ಯಾಸಿ ಕಲೆಗಳು ಇರುತ್ತವೆ. ನಿಮಗೆ ಯಾವ ರೀತಿ ಹವ್ಯಾಸವಿದ್ದರೂ ಅದರ ವಿವರ ಹಾಗೂ ಚಿತ್ರಗಳನ್ನು ಈ ವಿಭಾಗಕ್ಕೆ ಕಳಿಸಬಹುದು
ಕುಮಾರಿ ತೀಕ್ಷ್ಣ ಅವರು ರಚಿಸಿದ ” ಒಣಗಿದ ಹೂಗಳು ಮತ್ತು ಗಾಜು ” ಕಲೆ (dry flowers and glass art )

ಶ್ರೀ ಕೆ ವಿ ಜಯರಾಂ ಅವರು ರಚಿಸಿದ “ಪ್ರೀತಿಯ ನಾಯಿಯ ಜೊತೆ ಮಹಿಳೆ ” ಚಿತ್ರಕಲೆ

ನಾನು ತೆಗೆದ ಛಾಯಾಚಿತ್ರ –
ಶ್ರೀ ಜಯರಾಂ ಎ ಎಸ್
ಈ ವಿಭಾಗದಲ್ಲಿ , ನೀವೇ ತೆಗೆದ ಚಿತ್ರ, ಒಂದೂ ಅಥವಾ ಎರಡನ್ನು ಕಳಿಸಬಹುದು .ಅದು ಕ್ಯಾಮರಾ ದಲ್ಲಾಗಲಿ ಅಥವಾ ಮೊಬೈಲ್ ನಲ್ಲಿ ಆಗಲಿ ತೆಗೆದಿರಬಹುದು. ಆದರೆ ಅದರಲ್ಲಿ ಏನೋ ಒಂದು ವಿಶೇಷತೆ ಇರಬೇಕು. ಸಾಮಾನ್ಯ ಚಿತ್ರಗಳನ್ನು ಕಳಿಸುವುದು ಬೇಡ .ಹಾಗೆಯೇ ಇತರ ಮನುಷ್ಯರು ಇರುವ ಚಿತ್ರಗಳನ್ನು ಆದಷ್ಟು ಬಳಸುವುದು ಬೇಡ. ಮುಖ್ಯವಾಗಿ ಅದ್ಭುತ ಪ್ರವಾಸ ತಾಣಗಳಲ್ಲಿ ತೆಗೆದ ಚಿತ್ರಗಳು ಅಥವಾ ಇನ್ಯಾವುದೇ ಉತ್ತಮ ಚಿತ್ರಗಳನ್ನು ಕಳಿಸಬಹುದು.
ಇಲ್ಲಿ ನನ್ನ ಕೆಲವು ಉದಾಹರಣೆಯನ್ನು ಕೊಟ್ಟಿದ್ದೇನೆ.
1. ಇದು ಈ ವರ್ಷದ ಗಣೇಶನ ಹಬ್ಬದಲ್ಲಿ ನಮ್ಮ ಮನೆಯಲ್ಲಿ ತೆಗೆದ ಚಿತ್ರ. ಶ್ರೀ ಗಣೇಶನಿಗೆ ಕಡುಬು ನೈವೇದ್ಯಕ್ಕೆ ಇಟ್ಟಿರುವುದು .

ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನನ್ನ ಮನಸ್ಸಿನ ಭಾವನೆಗೆ , ಗಣೇಶನೇ ಕಡುಬಿನಲ್ಲಿ ಇರುವಂತೆ ಅನಿಸಿತು ! ನಿಮಗಾಗಿ ಮೇಲಿನ ಚಿತ್ರ ಎಡಿಟ್ ಮಾಡಿ ಹಾಕಿದ್ದೇನೆ .

2.ಒಂದು ಲೋಟ ಬಿಸಿ ನೀರಿನ ಮೇಲೆ ಕೆಲವು ಕಾಲ ಕಪ್ ಮುಚ್ಚಿ ತೆಗೆದಾಗ …

ಹತ್ತಿರದಿಂದ ನೋಡಿದಾಗ ನೀರಿನ ಸಣ್ಣ ಹನಿಗಳು ..

ಇನ್ನೂ ಹತ್ತಿರದಿಂದ ನೋಡಿದಾಗ ..
