ಹೊಸ ಆವಿಷ್ಕಾರ – ನವೆಂಬರ್ 2026 : ಕಾಗದ ಮತ್ತು ಪೆನ್ಸಿಲ್ನಿಂದ ತಯಾರಿಸಿದ ಅಗ್ಗದ ಸೆನ್ಸರ್
ಸೆನ್ಸರ್ ಎಂದಾಕ್ಷಣ ನಮ್ಮ ಮನಸ್ಸಿಗೆ ಆಧುನಿಕ ಯಂತ್ರಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್ಗಳು ಮತ್ತು ದುಬಾರಿ ಉಪಕರಣಗಳು ನೆನಪಾಗುತ್ತವೆ. ಆದರೆ ಕಾಗದ ಮತ್ತು ಸಾಮಾನ್ಯ ಪೆನ್ಸಿಲ್ನಿಂದಲೇ ಕೆಲವು ಸಂಗತಿಗಳನ್ನು ಪತ್ತೆಹಚ್ಚುವ ಸಂವೇದಕವನ್ನು ತಯಾರಿಸಬಹುದೆಂದರೆ ಆಶ್ಚರ್ಯವಾಗಬಹುದು. ಗೌಹಾಟಿ ವಿಶ್ವವಿದ್ಯಾಲಯದ ಸಂಶೋಧಕರು ಇಂತಹ ಸರಳ ಹಾಗೂ ಅಗ್ಗದ ಸೆನ್ಸರ್ ಅಭಿವೃದ್ಧಿಪಡಿಸಿದ್ದಾರೆ. ಇದರ ವಿಶೇಷತೆ ಎಂದರೆ, ಸಂಕೀರ್ಣವಾದ ಉಪಕರಣಗಳ ಬದಲಿಗೆ ಕಾಗದ ಮತ್ತು ಪೆನ್ಸಿಲ್ನಂತಹ ಸುಲಭವಾಗಿ ದೊರೆಯುವ ವಸ್ತುಗಳನ್ನು ಬಳಸಿರುವುದು. ಪೆನ್ಸಿಲ್ನಲ್ಲಿರುವ ಗ್ರಾಫೈಟ್ ವಿದ್ಯುತ್ ಪ್ರವಾಹವನ್ನು ಸಾಗಿಸಬಲ್ಲದು. ಕಾಗದದ ಮೇಲೆ ಪೆನ್ಸಿಲ್ನಿಂದ ನಿರ್ದಿಷ್ಟ ರೀತಿಯಲ್ಲಿ…